Saturday, 14th December 2024

ಆಸ್ಕರ್ ’ಉತ್ತಮ ನಟ’ ಪ್ರಶಸ್ತಿ ಗೆದ್ದ ಅಂಥೋಣಿ ಹಾಪ್ಕಿನ್ಸ್

ಲಾಸ್‍ಏಂಜಲಿಸ್: ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದ ಫಾದರ್ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಆಸ್ಕರ್ ಉತ್ತಮ ನಟ ಪ್ರಶಸ್ತಿ ಒಲಿದುಬಂದಿದೆ.

ಮಾ ರೈನ್ಸಿಸ್ ಬ್ಲಾಕ್ ಬಾಟಮ್ ಚಿತ್ರದಲ್ಲಿ ಅಭಿನಯಿಸಿದ್ದ ದಿವಂಗತ ಚಾದ್‍ವಿಕ್ ಬೋಸ್‍ಮನ್ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸುವ ಸಾಧ್ಯತೆಗಳಿತ್ತು ಎಂದೇ ಭಾವಿಸಲಾಗಿತ್ತು. ಆದರೆ, ಊಹಾಪೋಹಗಳನ್ನು ಮೀರಿ ಹಾಪ್ಕಿನ್ಸ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬೋಸ್‍ಮನ್ ಅವರು ಕಳೆದ ವರ್ಷ ಮೃತರಾದರು. ಇವರ ಜೊತೆಗೆ ಸೌಂಡ್ ಆಫ್ ಮೆಟಲ್ ಚಿತ್ರದ ನಟನೆಗಾಗಿ ರೀಜ್ ಅಹಮದ್ ಅವರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು. ಫ್ರಾನ್ಸ್ನ ನಟಿ ಮ್ಯಾಕ್ ಡೋರ್ಮಾಂಡ್ ಅವರು ನೋ ಮ್ಯಾಡ್‍ಲ್ಯಾಂಡ್ ಚಿತ್ರದ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.