Thursday, 12th December 2024

ಕಾಪಿರೈಟ್​ ಉಲ್ಲಂಘನೆ: Apple​ನ ಸ್ಮಾರ್ಟ್​ವಾಚ್​​ಗಳ ಮಾರಾಟಕ್ಕೆ ನಿರ್ಬಂಧ

ವಾಷಿಂಗ್ಟನ್​: ಅಮೆರಿಕದಲ್ಲಿ ಆಯಪಲ್ ವಾಚ್ ಮಾರಾಟ ನಿಷೇಧಿಸುವ ಆದೇಶ ಜಾರಿಯಾಗದಂತೆ ಮಾಡುವ ಆಯಪಲ್​ನ ಪ್ರಯತ್ನಗಳು ವಿಫಲ ವಾಗಿವೆ.

ಎರಡು ಆಯಪಲ್ ವಾಚ್ ಮಾದರಿಗಳಾದ ಆಯಪಲ್ ವಾಚ್ ಸೀರಿಸ್ 9 ಮತ್ತು ಆಪಲ್ ವಾಚ್ ಅಲ್ಟ್ರಾ 2 ಅನ್ನು ತನ್ನ ವೆಬ್​ಸೈಟ್​ನಲ್ಲಿ ಮತ್ತು ಮಳಿಗೆಗಳಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸುವುದಾಗಿ ತಿಳಿಸಿತ್ತು. ಆದರೆ, ಹಳೆಯ ಮಾದರಿಯ ವಾಚ್​ಗಳ ಮಾರಾಟವನ್ನು ಮುಂದುವರಿಸಲಿದೆ.

ಆಯಪಲ್​ ವಾಚ್​ನಲ್ಲಿರುವ ಬ್ಲಡ್ ಆಕ್ಸಿಜನ್ ಸೆನ್ಸರ್ ತಂತ್ರಜ್ಞಾನವು ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆ ತಯಾರಿಸುವ ಕಂಪನಿಯಾದ ಮಾಸಿಮೊದ ಕಾಪಿರೈಟ್​ ಉಲ್ಲಂಘನೆಯಾಗಿದೆ ಎಂದು ಇಂಟರ್ ನ್ಯಾಷನಲ್ ಟ್ರೇಡ್ ಕಮಿಷನ್ ಆದೇಶಿಸಿದೆ. ಹೀಗಾಗಿ ಅಮೆರಿಕದಲ್ಲಿ ಈ ತಂತ್ರಜ್ಞಾನ ಹೊಂದಿರುವ ಆಯಪಲ್​ ವಾಚ್​ಗಳ ಮಾರಾಟವನ್ನು ನಿರ್ಬಂಧಿಸಲಾಗುತ್ತಿದೆ.

ಆದೇಶ ಜಾರಿಯಾದಲ್ಲಿ ವರ್ಷಾಂತ್ಯದ ಮಾರಾಟ ಸಮಯದಲ್ಲಿಯೇ ಆಯಪಲ್ ತನ್ನ ಅತ್ಯಂತ ಜನಪ್ರಿಯ ಸಾಧನಗಳನ್ನು ಮಾರಾಟ ಮಾಡಲಾಗದ ಸನ್ನಿವೇಶ ಎದುರಿಸಲಿದೆ.