ಇಸ್ರೇಲ್ ಮೇಲೆ ಇತ್ತೀಚಿಗೆ ಇರಾನ್ (Iran) ನಡೆಸಿದ ಕ್ಷಿಪಣಿ (Attack on Israel ) ದಾಳಿಯ ಬಳಿಕ ಸಂಭ್ರಮಾಚರಣೆ (Celebration) ನಡೆಸಿದ್ದ ವೇಳೆ ಹಲವಾರು ಮಂದಿ ಇರಾನಿಯನ್ನರು ಗಾಯಗೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ಇರಾನ್ ಇತ್ತೀಚೆಗೆ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇದನ್ನು ಇಸ್ರೇಲ್ ವಿರುದ್ದದ ವಿಜಯವೆಂದು ಗ್ರಹಿಸಿದ ಇರಾನ್ನಿಯನ್ನರು ಸಂಭ್ರಮಾಚರಣೆ ನಡೆಸಿದ್ದಾರೆ. ನೂರಾರು ಜನರು ಒಂದೆಡೆ ಗುಂಪುಗೂಡಿ ಸಂಭ್ರಮಾಚರಣೆ ಮಾಡಿ ಪಟಾಕಿಗಳನ್ನು ಸಿಡಿಸಿದ್ದಾರೆ. ಆ ಪಟಾಕಿಗಳು ನೆರೆದಿದ್ದ ಜನರ ಗುಂಪಿನ ಮೇಲೆ ಬಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಹಬ್ಬದ ರೀತಿಯಲ್ಲಿ ದೊಡ್ಡ ಮಟ್ಟದಲ್ಲೇ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ದೀರ್ಘಕಾಲದಿಂದ ಇಸ್ರೇಲ್ ವಿರುದ್ಧ ಕಿಡಿ ಕಾರುತ್ತಿರುವ ಇರಾನ್ನಲ್ಲಿ. ಇರಾನ್ ನಡೆಸಿದ ದಾಳಿಯ ಸಮಯದಲ್ಲಿ ಇಸ್ರೇಲ್ ಅನುಭವಿಸಿರುವುದಕ್ಕಿಂತ ಹೆಚ್ಚಿನ ನಷ್ಟ ಅನುಭವಿಸಿದೆ. ಹಲವಾರು ಮಂದಿ ಗಾಯಗೊಳ್ಳುವಂತಾಗಿದೆ.
🚨 Breaking: Dozens injured in Iran during celebrations after attacking Israel.
— Dr. Eli David (@DrEliDavid) October 2, 2024
That is a higher injury rate than what Israel suffered (zero injuries) 🤡
pic.twitter.com/v4DvUuI8ZU
ಇಸ್ರೇಲ್ ವಿರುದ್ಧದ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಇಲ್ಲಿನ ನಾಗರಿಕರು ಅದನ್ನು ಬೆಂಬಲಿಸುತ್ತಾರೆ. ವಿಪರ್ಯಾಸವೆಂದರೆ ಮಿಲಿಟರಿ ಕಾರ್ಯಾಚರಣೆಗಿಂತ ಸಂಭ್ರಮಾಚರಣೆಯ ವೇಳೆಯೇ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
Hashem Safieddine: ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಉತ್ತರಾಧಿಕಾರಿಯನ್ನೂ ಹೊಡೆದುರುಳಿಸಿದ ಇಸ್ರೇಲ್
ಹೆಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇರಾನ್ ಇಸ್ರೇಲ್ ಕಡೆಗೆ 400ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿದ್ದು, ಇರಾನ್ನಲ್ಲಿ ಸೈರನ್ಗಳು ಮೊಳಗುವಂತೆ ಮಾಡಿತ್ತು. ಆದರೆ ಈ ಕ್ಷಿಪಣಿ ದಾಳಿಗಳನ್ನು ಇಸ್ರೇಲ್ ಸಮರ್ಥವಾಗಿ ಎದುರಿಸಿರುವುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿತ್ತು.