Sunday, 15th December 2024

ಶಾಪಿಂಗ್ ಮಾಲ್‌ನಲ್ಲಿ ಚೂರಿಯಿಂದ ಹಲ್ಲೆ: ಐವರ ಸಾವು

ಸಿಡ್ನಿ: ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಜನರ ಮೇಲೆ ಚೂರಿಯಿಂದ ತೀವ್ರವಾಗಿ ಹಲ್ಲೆ ಮಾಡಿದ್ದು ಘಟನೆಯಲ್ಲಿ 5 ಜನರು ಮೃತಪಟ್ಟು, ಮಗು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಬೋಂಡಿ ಜಂಕ್ಷನ್‌ನಲ್ಲಿರುವ ವೆಸ್ಟ್‌ಫೀಲ್ಡ್ ಶಾಪಿಂಗ್ ಸೆಂಟರ್‌ನಲ್ಲಿ ಶನಿವಾರ ಈ ಘಟನೆ ನಡೆದಿದೆ.

ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಮಗು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಸದ್ಯ ದಾಳಿಕೋರ ಯಾರು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ದಾಳಿ ಮಾಡಿದ ವ್ಯಕ್ತಿ ಯಾರು? ಹಾಗೂ ಘಟನೆಗೆ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.