ಕ್ಯಾನ್‌ಬೆರಾ: ಸಹೋದ್ಯೋಗಿಯೊಬ್ಬರಿಂದ ದೇಶದ ಸಂಸತ್ತಿನಲ್ಲಿಯೇ ಅತ್ಯಾಚಾರಕ್ಕೊಳಗಾಗಿರುವುದಾಗಿ ಆರೋಪಿಸಿರುವ ಮಹಿಳೆಯೊಬ್ಬರಿಗೆ ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ಮಂಗಳವಾರ ಕ್ಷಮೆಯಾಚಿಸಿದ್ದಾರೆ.
ರಕ್ಷಣಾ ಸಚಿವ ಲಿಂಡಾ ರೆನಾಲ್ಡ್ಸ್ ಕಚೇರಿಯಲ್ಲಿ 2019ರ ಮಾರ್ಚ್‌ನಲ್ಲಿ ಮೋರಿಸನ್‌ರ ಆಡಳಿತಾರೂಢ ಲಿಬರಲ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ಮಹಿಳೆ ಆರೋಪಿಸಿದ್ದರು.
ತನ್ನ ವೃತ್ತಿಜೀವನದ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿ ಔಪಚಾರಿಕ ದೂರು ನೀಡುವುದರಿಂದ ಹಿಂದೆ ಸರಿದಿದ್ದೆ ಎಂದಿದ್ದಾರೆ. ರಾಜಧಾನಿಯಲ್ಲಿನ ಪೊಲೀಸರು, ಏಪ್ರಿಲ್ 2019 ರಲ್ಲಿ ದೂರುದಾರರೊಂದಿಗೆ ಮಾತನಾಡಿದ್ದನ್ನು ದೃಢಪಡಿಸಿದ್ದು, ಔಪಚಾರಿಕ ದೂರು ನೀಡದಿರಲು ನಿರ್ಧರಿಸಿದ್ದರು ಎಂದು ತಿಳಿಸಿದ್ದಾರೆ.
ನನ್ನ ಮೇಲಿನ ದಾಳಿಯ ಬಗ್ಗೆ ರೆನಾಲ್ಡ್ಸ್ ಕಚೇರಿಯ ಹಿರಿಯ ಸಿಬ್ಬಂದಿಗೆ ತಿಳಿಸಿದ್ದೇನೆ. ನಂತರ ತನ್ನ ಮೇಲೆ ಹಲ್ಲೆ ನಡೆಸಿದ್ದ ಕಚೇರಿಯಲ್ಲಿಯೇ ನಡೆಯುವ ಸಭೆಯಲ್ಲಿ ಭಾಗವಹಿಸಲು ಕೇಳಿಕೊಂಡರು ಎಂದು ಹೇಳಿದರು.