Sunday, 15th December 2024

ಮೆಲ್ಬೋರ್ನ್ ನಲ್ಲಿ ಮತ್ತೊಂದು ಹಿಂದೂ ದೇಗುಲ ಧ್ವಂಸ

ಮೆಲ್ಬೋರ್ನ್ : ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಸಂಘಟನೆ ಬೆಂಬಲಿಗರ ಅಟ್ಟಹಾಸ ಮುಂದುವರೆದಿದ್ದು, ಮೆಲ್ಬೋರ್ನ್ ನಲ್ಲಿ ಮತ್ತೊಂದು ಹಿಂದೂ ದೇಗುಲವನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಿದ ಒಂದು ವಾರದ ನಂತರ, ಮೆಲ್ಬೌರ್ನ್ನಲ್ಲಿರುವ ಮತ್ತೊಂದು ದೇವಾಲಯವನ್ನು ಖಲಿಸ್ತಾನ್ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ.

ಕ್ಯಾರಮ್ ಡೌನ್ಸ್ ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಾಲಯದ ವಿಧ್ವಂಸಕ ಕೃತ್ಯವನ್ನು ದುಷ್ಕರ್ಮಿಗಳು ಮಾಡಿದ್ದಾರೆ ಎಂದು ಆರೋಪಿಸ ಲಾಗಿದೆ. ಧ್ವಂಸದ ಸಮಯದಲ್ಲಿ ದೇವಾಲಯದ ಆವರಣದ ಬಳಿ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಬರಹಗಳನ್ನು ಗೋಡೆಗಳ ಮೇಲೆ ಬರೆಯಲಾಗಿದೆ.

ಇನ್ನು ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮಿಲ್ ಪಾರ್ಕ್‌ನ ಸ್ವಾಮಿ ನಾರಾಯಣ ದೇವಾಲಯದ ಗೋಡೆಗಳ ಮೇಲೆ ಹಿಂದೂಸ್ತಾನ್ ಮುರ್ದಾಬಾದ್ ಎಂದು ಬರೆಯಲಾಗಿತ್ತು. ಇದೀಗ ಶ್ರೀ ಶಿವವಿಷ್ಣುವಿನ ದೇಗುಲವನ್ನು ಧ್ವಂಸ ಗೊಳಿಸಲಾಗಿದೆ.