Monday, 16th September 2024

ಅಜರ್ಬೈಜಾನಿ ಸೈನಿಕರ ದಾಳಿ: 25 ನಾಗರೀಕರ ಸಾವು

ಕರಾಬಖ್‌: ರ್ಮೇನಿಯನ್ ನಿಯಂತ್ರಿತ ಕರಾಬಖ್‌ನಲ್ಲಿ ಅಜರ್ಬೈಜಾನಿ ಸೈನಿಕರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ 25 ನಾಗರೀಕರು ಸಾವನ್ನಪ್ಪಿ ದ್ದಾರೆ.

ಅಜೆರ್ಬೈಜಾನ್ ಸೈನಿಕರು ಅರ್ಮೇನಿಯಾದಿಂದ ಬೇರ್ಪಟ್ಟ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಅವರ ಮಿಲಿಟರಿ ಆಕ್ರಮಣವು ನಗೊರ್ನೊ-ಕರಾಬಖ್‌ನ ಪ್ರದೇಶದಲ್ಲಿ ಇಪ್ಪತ್ತೈದು ಅಮಾಯಕ ಜನರ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸೈನಿಕರ ದಾಳಿಯಲ್ಲಿ ಮಕ್ಕಳು, ವೃದ್ಧರೆನ್ನದೆ ಸುಮಾರು 138 ಜನರು ಗಾಯಗೊಂಡಿದ್ದಾರೆ. ಈ ಆಕ್ರಮಣವು ನೆರೆಯ ಅರ್ಮೇನಿಯಾದೊಂದಿಗೆ ಹೊಸ ಯುದ್ಧದ ಬೆದರಿಕೆಯನ್ನು ಹೆಚ್ಚಿಸಿದೆ.

Leave a Reply

Your email address will not be published. Required fields are marked *