Friday, 22nd November 2024

Bangladesh Unrest: ರಾಜೀನಾಮೆ ಕೊಡಲ್ಲ ಎಂದಿದ್ದಕ್ಕೆ ಗರ್ಭಿಣಿ ಹಿಂದೂ ಶಿಕ್ಷಕಿಯನ್ನು ಬೀದಿಗೆಳೆದು ಕಿರುಕುಳ; ಶಾಕಿಂಗ್‌ ವಿಡಿಯೋ ಇಲ್ಲಿದೆ

bangaldesh unrest

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶ(Bangladesh Unrest)ದಲ್ಲಿ ಕೆಲವು ತಿಂಗಳಿಂದ ಭುಗಿಲೆದ್ದಿರುವ ಹಿಂಸಾಚಾರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ದೊಡ್ಡ ಮಟ್ಟದ ಧಂಗೆ ಕಡಿಮೆಯಾಗಿದ್ದರೂ ಅಲ್ಲಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳು ಆಗಾಗ ವರದಿಯಾಗುತ್ತಿವೆ. ಇದೀಗ ಮತ್ತೆ ಬಾಂಗ್ಲಾದೇಶ ಸುದ್ದಿಯಲ್ಲಿದ್ದು, ಗರ್ಭಿಣಿ ಶಿಕ್ಷಕಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸುತ್ತಿರುವ ಭೀಕರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌(Viral video) ಆಗುತ್ತಿವೆ.

ಗರ್ಭಿಣಿ ಶಿಕ್ಷಕಿ ಶಿಖಾ ರಾಣಿ ರೇ ಎಂಬಾಕೆ ರಾಜೀನಾಮೆಗೆ ನಿರಾಕರಿಸಿದರೆಂಬ ಕಾರಣಕ್ಕೆ ಆಕೆಯನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿ, ಆಕೆಯನ್ನು ಅವಮಾನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಘಟನೆ ಮುರಾದಾನಗರದ ಕೋಮಿಲ್ಲಾದಲ್ಲಿ ನಡೆದಿದ್ದು, ಶಿಕ್ಷಕಿ ಮೇಲೆ ಜನ ಹಲ್ಲೆಯನ್ನೂ ನಡೆಸಿದ್ದಾರೆ.

ಶಿಖಾ ಹಿಂದೂ ಎಂಬ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮ ಸಲ್ಲಿಸುವಂತೆ ಆಕೆ ಕೆಲಸ ಮಾಡುತ್ತಿರುವ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್‌ ಬಿಲಾಲ್‌ ಒತ್ತಾಯಿಸಿದ್ದರು. ಆದರೆ ಏನೇ ಅದರೂ ರಾಜೀನಾಮೆ ನೀಡುವುದಿಲ್ಲ ಎಂದು ಶಿಖಾ ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಸುಮ್ಮನಾಗದ ಬಿಲಾಲ್‌ ಕೆಲವು ಸ್ಥಳೀಯ ಜನರ ಗುಂಪನ್ನು ಕಟ್ಟಿಕೊಂಡು ಶಿಖಾ ಅವರನ್ನು ಬಲವಂತವಾಗಿ ಬೀದಿಗೆ ಎಳೆದು ಮೆರವಣಿಗೆ ಮಾಡಿ ಅವಮಾನ ಮಾಡಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಶಿಖಾ ಅವರ ಸಹಾಯಕ್ಕೆ ಯಾರೊಬ್ಬರೂ ಮುಂದಾಗಲಿಲ್ಲ. ಅಲ್ಲದೇ ಭಯದಿಂದಾಗಿ ಆಕೆಯ ಕುಟುಂಬಸ್ಥರು ಪೊಲೀಸರು ದೂರನ್ನೂ ನೀಡಿಲ್ಲ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಅನೇಕ ನೆಟ್ಟಿಗರು ಸ್ಥಳೀಯರ ಕೃತ್ಯ ಮತ್ತು ಸರಕಾರದ ಮೌನವನ್ನು ಖಂಡಿಸಿದ್ದಾರೆ.

ಶೇಖ್‌ ಹಸೀನಾ(Sheikh Hasina) ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಲ್ಲಿನ ಅಲ್ಪಸ‍ಂಖ್ಯಾತ ಹಿಂದೂಗಳ ಸ್ಥಿತಿ ಚಿಂತಾಜನಕವಾಗಿದೆ. ಸಾವಿರಾರು ಹಿಂದೂಗಳನ್ನು ಗುರಿಯಾಗಿ ನಿತ್ಯ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಇದೀಗ ಡಜನ್‌ಗಟ್ಟಲೇ ಹಿಂದೂ ಶಿಕ್ಷಕರನ್ನು ರಾಜೀನಾಮೆ ತಮ್ಮ ಸ್ಥಾನಕ್ಕೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಬಗ್ಗೆ ವರದಿಯಾಗಿದೆ. ಅಲ್ಲದೇ ಈಗಾಗಲೇ ಸರ್ಕಾರಿ ಹುದ್ದೆಯಲ್ಲಿದ್ದ ನೂರಾರು ಹಿಂದೂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ: Nitin Gadkari ಪ್ರತಿಪಕ್ಷ ನಾಯಕರಿಂದ ಹಲವು ಬಾರಿ ಪ್ರಧಾನಿಯಾಗುವ ಆಫರ್‌ ಬಂದಿತ್ತು- ಮತ್ತೆ ಬಾಂಬ್‌ ಸಿಡಿಸಿದ ಗಡ್ಕರಿ