Thursday, 12th December 2024

ಹಿಂದೂ ದೇಗುಲ ಧ್ವಂಸ: ಓರ್ವ ಬಂಧನ

ಢಾಕಾ: ಬಾಂಗ್ಲಾದೇಶದ ಬ್ರಾಹ್ಮಣ ಬಾರಿಯಾ ಜಿಲ್ಲೆಯಲ್ಲಿ ಹಿಂದೂ ದೇಗುಲವನ್ನು ಧ್ವಂಸ ಗೊಳಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಖಲೀಲ್ ಮಿಯಾ(36) ಎಂದು ಗುರುತಿಸಲಾಗಿದೆ. ನಿಯಾಮತ್‍ಪುರ ಗ್ರಾಮ ದಲ್ಲಿರುವ ನಿಯಾಮತ್ ಪುರ್ ದುರ್ಗಾ ದೇವಸ್ಥಾನವನ್ನು (Durga Temple) ಧ್ವಂಸಗೊಳಿಸಿ ದ್ದಾನೆ.

ದೇಗುಲ ಧ್ವಂಸದ ವಿಚಾರ ಕೂಡಲೇ ಭಾರೀ ಸುದ್ದಿಯಾಯಿತು. ಕೂಡಲೇ ಸ್ಥಳದಲ್ಲಿ ಜಮಾ ಯಿಸಿದ ಜನ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಬ್ರಾಹ್ಮಣ ಬಾರಿಯಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶೆಖಾವತ್ ಹುಸೈನ್ ಪ್ರತಿಕ್ರಿಯಿಸಿ, ಈ ಕೃತ್ಯದ ಹಿಂದೆ ಯಾರದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ವಿಧ್ವಂಸಕ ಕೃತ್ಯವು ಸ್ಥಳೀಯ ಹಿಂದೂ ಸಮುದಾಯದ ಸದಸ್ಯರಲ್ಲಿ ಕೋಪ ಮತ್ತು ಅಸಮಾಧಾನ ಹುಟ್ಟುಹಾಕಿದೆ ಎಂದು ನಿಯಾಮತ್‍ಪುರ ಸರ್ವಜನನ ದುರ್ಗಾ ದೇವಸ್ಥಾನದ ಅಧ್ಯಕ್ಷ ಜಗದೀಶ್ ದಾಸ್ ತಿಳಿಸಿದ್ದಾರೆ