Saturday, 14th December 2024

ಬಾರ್ಕ್ಲೇಸ್ ಬ್ಯಾಂಕಿನ 2,000 ಉದ್ಯೋಗಿಗಳ ವಜಾ..!

ಲಂಡನ್: ಯುಕೆಯ ಬಹುರಾಷ್ಟ್ರೀಯ ಬಾರ್ಕ್ಲೇಸ್ ಬ್ಯಾಂಕ್ 2,000 ಉದ್ಯೋಗಿಗಳನ್ನು 1 ಬಿಲಿಯನ್ ಪೌಂಡ್‌ಗಳು ಅಥವಾ 1.25 ಬಿಲಿಯನ್ ಡಾಲರ್‌ಗಳ ವೆಚ್ಚ ಕಡಿತಕ್ಕಾಗಿ ವಜಾ ಮಾಡಬಹುದು ಎಂದಿದೆ.

ಬಾರ್ಕ್ಲೇಸ್ ಬ್ಯಾಂಕ್ ವಿಶ್ವದ 10 ನೇ ಅತಿದೊಡ್ಡ ಬ್ಯಾಂಕ್ ಮತ್ತು 81,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಬ್ಯಾಂಕ್ ಅನ್ನು 1690 ರಲ್ಲಿ ಸ್ಥಾಪಿಸಲಾಯಿತು.

ಬಾರ್ಕ್ಲೇಸ್ ಬ್ಯಾಂಕಿನ ಈ ಹಿಂಬಡ್ತಿಯು ಮುಖ್ಯವಾಗಿ ಬ್ರಿಟಿಷ್ ಬ್ಯಾಂಕ್ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಬ್ಯಾಂಕ್‌ನ ವ್ಯವಸ್ಥಾಪಕರು ಪರಿಶೀಲನೆ ಕಾರ್ಯದಲ್ಲಿ ನಿರತರಾಗಿದ್ದು, ಕಂಪನಿಯು ತನ್ನ ಯೋಜನೆ ಯನ್ನು ಮುಂದುವರಿಸಿದರೆ, ಸುಮಾರು 1500 ರಿಂದ 2000 ಉದ್ಯೋಗಿಗಳ ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ.

1 ಬಿಲಿಯನ್ ಪೌಂಡ್‌ಗಳಷ್ಟು ವೆಚ್ಚವನ್ನು ಕಡಿತಗೊಳಿಸುವುದು ಗುರಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬಾರ್ಕ್ಲೇಸ್ ಸಿಇಒ ಸಿ.ಎಸ್.ವೆಂಕಟಕೃಷ್ಣನ್, ಮುಂಬರುವ ದಿನಗಳಲ್ಲಿ ಬ್ಯಾಂಕ್ ಒಟ್ಟು ಬಿಲಿಯನ್ ಪೌಂಡ್‌ಗಳಷ್ಟು ವೆಚ್ಚವನ್ನು ಕಡಿತ ಗೊಳಿಸಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ. BX ಎಂದು ಕರೆಯಲ್ಪಡುವ ಬಾರ್ಕ್ಲೇಸ್ ಎಕ್ಸಿಕ್ಯೂಷನ್ ಸರ್ವೀಸಸ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಕಡಿತದ ಪರಿಣಾಮವು ಹೆಚ್ಚು ಇರುತ್ತದೆ.