Thursday, 12th December 2024

Begging Permit: ಈ ದೇಶದಲ್ಲಿ ಭಿಕ್ಷೆ ಬೇಡಲೂ ಬೇಕು ಪರ್ಮಿಷನ್‌!

Begging Permit

ಬೀದಿ, ಅಂಗಡಿ, ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವುದು (Begging Permit) ಈ ದೇಶದಲ್ಲಿ ಒಂದು ಕೆಲಸವೆಂದು ಪರಿಗಣಿಸಲಾಗಿದೆ! ಹೀಗಾಗಿ ಯಾರಾದರೂ ಇಲ್ಲಿ ಭಿಕ್ಷೆ ಬೇಡಬೇಕಾದರೆ ಅಧಿಕೃತವಾಗಿ ಪರವಾನಗಿಯನ್ನು ಪಡೆಯಬೇಕು. ಹೀಗೆ ಭಿಕ್ಷಾಟನೆಗೆ ಪರವಾನಗಿಯನ್ನು ನೀಡುವುದನ್ನು ಪರಿಚಯಿಸಿದ ವಿಶ್ವದ ಮೊದಲ ಐರೋಪ್ಯ ದೇಶ (European country) ಸ್ವೀಡನ್ (Sweden).

ಸ್ವೀಡನ್‌ನಲ್ಲಿ ಯಾರಾದರೂ ಬೀದಿಯಲ್ಲಿ ಹಣ ಕೇಳಬೇಕು ಎಂದಾದರೆ ಪರವಾನಗಿಯನ್ನು ಪಡೆಯಲೇಬೇಕು. ಇದಕ್ಕಾಗಿ ಸುಮಾರು 2,315 ರೂ. ಅನ್ನು ಮುಂಗಡವಾಗಿ ಪಾವತಿಸಬೇಕಿದೆ. ಈ ಪರವಾನಗಿಯು ಮೂರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಆನ್‌ಲೈನ್‌ ಅಥವಾ ಪೊಲೀಸ್ ಠಾಣೆಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಭಿಕ್ಷಾಟನೆಯ ಪರವಾನಗಿಯನ್ನು ಪಡೆಯಬಹುದು. ಇದಕ್ಕೆ ಸೂಕ್ತವಾದ ಗುರುತು ಚೀಟಿ ಅಗತ್ಯವಿದೆ.

2019ರಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಈ ನಿಯಮದಡಿ ಒಬ್ಬ ವ್ಯಕ್ತಿಯು ಪರವಾನಿಗೆ ಇಲ್ಲದೆ ಭಿಕ್ಷೆ ಬೇಡಿದರೆ ಸುಮಾರು 38,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.

Begging Permit

ಈ ಕುರಿತು ಪ್ರತಿಕ್ರಿಯಿಸಿರುವ ಕೌನ್ಸಿಲರ್ ಜಿಮ್ಮಿ ಜಾನ್ಸನ್, ಸುಮಾರು ಒಂದು ವರ್ಷದ ವಿಳಂಬದ ಬಳಿಕ ಈ ಕಾನೂನನ್ನು ಜಾರಿಗೆಗೊಳಿಸಲಾಗಿದೆ. ಭಿಕ್ಷಾಟನೆಗೆ ಪರವಾನಗಿ ನೀಡಿರುವುದರಿಂದ ಹೆಚ್ಚಿನ ಹಣವನ್ನು ಜನರಿಂದ ಕೇಳುವುದು ಕಷ್ಟ. ಆದರೆ ಇದು ಕಷ್ಟದಲ್ಲಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Viral Video: ವಿಶ್ವದ ಅತೀ ದೊಡ್ಡ ವಸತಿ ಕಟ್ಟಡ! ಇಲ್ಲಿ ವಾಸಿಸುತ್ತಿದ್ದಾರೆ 20,000ಕ್ಕೂ ಹೆಚ್ಚು ಜನ!

ಈ ಕಾನೂನು ದುರ್ಬಲ ಜನರಿಗೆ ಕಿರುಕುಳ ನೀಡಲು ಅಲ್ಲ. ಅವರ ಕಷ್ಟಗಳನ್ನು ಪರಿಹರಿಸಲು. ಸ್ವೀಡಿಷ್ ಕಲ್ಯಾಣ ಮಾದರಿಯೊಳಗೆ ಭಿಕ್ಷಾಟನೆಯು ಸೇರುತ್ತದೆ ಎಂದು ನಾವು ಭಾವಿಸುತ್ತೇವೆ. ಭಿಕ್ಷಾಟನೆಯನ್ನು ನಿಯಂತ್ರಿಸುವ ಪ್ರಯತ್ನಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಕೇಳಿದ್ದೇವೆ ಎಂದು ಜಾನ್ಸನ್ ವಿವರಣೆ ನೀಡಿದ್ದಾರೆ.