Thursday, 12th December 2024

ಬೆಲಾರಸ್ ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ ನಿಧನ

ಮಿನ್ಸ್ಕ್ (ಬೆಲಾರಸ್): ಬೆಲಾರಸ್ ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ(64)ಹಠಾತ್‌ ನಿಧನರಾದರು. ವ್ಲಾಡಿಮಿರ್ ಮಕಿ ಅವರ ನಿಧನಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ.

ಬೆಲಾರಸ್‌ನ ಅಧ್ಯಕ್ಷರು, ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ ಅವರ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಕ್ಷೀಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿವೆ.

ಮಕಿ ಅವರು 1958 ರಲ್ಲಿ ಬೆಲಾರಸ್‌ನ ಗ್ರೋಡ್ನೊ ಪ್ರದೇಶದಲ್ಲಿ ಜನಿಸಿದರು ಮತ್ತು 1980 ರಲ್ಲಿ ಮಿನ್ಸ್ಕ್ ಸ್ಟೇಟ್ ಪೆಡಾಗೋಗಿಕಲ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೇಜಸ್ ಮತ್ತು 1993 ರಲ್ಲಿ ಆಸ್ಟ್ರಿಯಾದ ವಿದೇಶಾಂಗ ಸಚಿವಾಲಯದ ಡಿಪ್ಲೊಮ್ಯಾಟಿಕ್ ಅಕಾಡೆಮಿ ಯಿಂದ ಪದವಿ ಪಡೆದರು ಎಂದು ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಜರ್ಮನ್ ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳವಾಗಿ, ವ್ಲಾಡಿಮಿರ್ ಮಕಿ ಅವರು 2012 ರಿಂದ ಬೆಲಾರಸ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನ ಪಡೆದರು.