Wednesday, 6th November 2024

Benjamin Netanyahu: ಏಕಾಏಕಿ ಇಸ್ರೇಲ್‌ನ ರಕ್ಷಣಾ ಸಚಿವ ವಜಾ; ʻನಂಬಿಕೆ ಇಲ್ಲ..ʼ ಎಂದ ನೆತನ್ಯಾಹು

Netanyahu

ಟೆಲ್‌ ಅವಿವ್‌: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಸಾರ್ವಜನಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು(Benjamin Netanyahu) ಮಂಗಳವಾರ ರಕ್ಷಣಾ ಸಚಿವ ಯೋವ್ ಗ್ಯಾಲಂಟ್(Yoav Gallant) ಅವರನ್ನು ವಜಾಗೊಳಿಸಿದ್ದಾರೆ. ಅವರ ಸ್ಥಾನಕ್ಕೆ ಮಾಜಿ ಉನ್ನತ ರಾಜತಾಂತ್ರಿಕ ಇಸ್ರೇಲ್ ಕಾಟ್ಜ್ ಅವರನ್ನು ನೇಮಿಸಲಾಗಿದೆ.

ಬೆಂಜಮಿನ್ ನೆತನ್ಯಾಹು ಅವರು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸಿದ್ದಾರೆ. ದೇಶದ ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗಳನ್ನು ನಿಭಾಯಿಸುವಲ್ಲಿ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ. ಕಳೆದ ಕೆಲವು ತಿಂಗಳುಗಳಿಂದ ಗ್ಯಾಲಂಟ್‌ ಮೇಲಿನ ನಂಬಿಕೆಯು ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರ ಅವಧಿಯನ್ನು ಇಂದು ಕೊನೆಗೊಳಿಸಲು ನಾನು ನಿರ್ಧರಿಸಿದ್ದೇನೆ” ಎಂದು ನೆತನ್ಯಾಹು ಅವರು ತಮ್ಮ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್‌ನ ಉನ್ನತ ಮಿಲಿಟರಿ ಬೆಂಬಲಿಗರಾದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚುನಾವಣೆಗಳು ನಡೆಯುತ್ತಿದ್ದಂತೆಯೇ ಇತ್ತೀಚಿಗೆ ಕದನ ವಿರಾಮ ಮತ್ತು ಗಾಜಾದಲ್ಲಿ ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕೆ ಒಪ್ಪಂದ ಮಾಡಿಕೊಂಡ ಬಳಿಕ ಈ ಮಹತ್ವದ ಬೆಳವಣಿಗೆ ನಡೆದೊದೆ.

ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ನಡೆಸಿದ ಮಾರಣಾಂತಿಕ ದಾಳಿಯ ನಂತರ ಹಮಾಸ್ ವಿರುದ್ಧ ಇಸ್ರೇಲ್‌ನ ಪ್ರತೀಕಾರದ ಮಿಲಿಟರಿ ದಾಳಿಯ ಬಗ್ಗೆ ನೆತನ್ಯಾಹು ಮತ್ತು ಗ್ಯಾಲಂಟ್ ಆಗಾಗ್ಗೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಹೀಗಾಗಿ ನೆತನ್ಯಾಹು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ನಂಬಿಕೆಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರ ಅವಧಿಯನ್ನು ಇಂದು ಕೊನೆಗೊಳಿಸಲು ನಾನು ನಿರ್ಧರಿಸಿದ್ದೇನೆ” ಎಂದು ನೆತನ್ಯಾಹು ಅವರ ಕಚೇರಿಯ ಹೇಳಿಕೆಯೊಂದು ತಿಳಿಸಿದೆ, ಅವರ ಸ್ಥಾನಕ್ಕೆ ಕಾಟ್ಜ್ ಅವರನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ..

ಗಿಡಿಯಾನ್ ಸಾರ್ ಅವರನ್ನು ವಿದೇಶಾಂಗ ಮಂತ್ರಿಯಾಗಿ ಕಾಟ್ಜ್ ಬದಲಿಗೆ ನೇಮಿಸಲಾಯಿತು. ತನ್ನ ವಜಾಗೊಳಿಸಿದ ನಂತರ, ಗ್ಯಾಲಂಟ್ ಇಸ್ರೇಲ್‌ ಭದ್ರತೆಯು ತನ್ನ ಜೀವನದ “ಮಿಷನ್” ಆಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Airstrike in Israel: ಇಸ್ರೇಲ್‌ ಮೇಲೆ ಅಪ್ಪಳಿಸಿದ ಹೆಜ್ಬುಲ್ಲಾ ರಾಕೆಟ್ಸ್ – ಡೆಡ್ಲಿ ಅಟ್ಯಾಕ್‌ಗೆ ಏಳು ಮಂದಿ ಬಲಿ; ಹಲವರಿಗೆ ಗಾಯ