Sunday, 15th December 2024

ಕೆನಡಾ: ಭಗವದ್ಗೀತೆ ಪಾರ್ಕ್‌ ಧ್ವಂಸ

ಟೊರಾಂಟೊ: ಕೆನಡಾದ ಬ್ರಾಂಪ್ಟನ್‌ ನಗರದಲ್ಲಿ ಇತ್ತೀಚೆಗಷ್ಟೇ ನಿರ್ಮಿಸಿ, ಲೋಕಾರ್ಪಣೆಗೊಳಿಸಲಾಗಿದ್ದ ಭಗವದ್ಗೀತೆ ಪಾರ್ಕ್‌ ಅನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ನಗರದ ಮೇಯರ್‌ ಪ್ಯಾಟ್ರಿಕ್‌ ಬ್ರೌನ್‌ ಅವರು ಟ್ವಿಟರ್‌ನಲ್ಲಿ ಈ ಘಟನೆಯನ್ನು ಖಚಿತಪಡಿಸಿದ್ದಾರೆ.

ಭಗವದ್ಗೀತೆ ಪಾರ್ಕ್‌ ಧ್ವಂಸವನ್ನು ಸಂಸದ, ಕರ್ನಾಟಕ ಮೂಲದ ಚಂದ್ರ ಆರ್ಯ ಖಂಡಿಸಿದ್ದು, ಇದೊಂದು ಜನಾಂಗೀಯ ದ್ವೇಷದ ಕ್ರಮ. ಹಿಂದೂ ವಿರೋಧಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.