Saturday, 23rd November 2024

ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನ ನಂತರ ಜೊ ಬೈಡನ್ ಅವರು ಮಾಡಿರುವ ಮೊದಲ ಕೆಲಸ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು. ಈ ಕುರಿತು ಆಡಳಿತಾತ್ಮಕ ಆದೇಶ ವನ್ನು ಹೊರಡಿಸಿದರು.

ಜಾಗತಿಕ ಹವಾಮಾನ ತಾಪಮಾನ ಏರಿಕೆಯನ್ನು ತಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಅಮೆರಿಕದ ನೆರವು, ಸಹಕಾರವಿದೆ ಎಂದು ಜೊ ಬೈಡನ್ ಘೋಷಿಸಿದರು. ಇದು ಜಾರಿಗೆ ಬರಲು ಒಂದು ತಿಂಗಳು ಬೇಕು.

ಹವಾಮಾನ ಬದಲಾವಣೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದವನ್ನು ಹೊಂದಿರುವ ಕಾನೂನುಬದ್ಧ ಒಪ್ಪಂದ ಪ್ಯಾರಿಸ್ ಒಪ್ಪಂದವಾಗಿದ್ದು 2015ರ ಡಿಸೆಂಬರ್ ನಲ್ಲಿ 196 ದೇಶಗಳು ಅಳವಡಿಸಿಕೊಂಡು ಮರುವರ್ಷ 2016ರ ನವೆಂಬರ್ 4ರಂದು ಒಪ್ಪಂದಕ್ಕೆ ಒಳಪಟ್ಟವು.