ಮಕ್ಕಳ (Birth Rate Declines) ದಾಖಲಾತಿಯಲ್ಲಿ (children enrolment) ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ಶಿಶುವಿಹಾರ (Kindergarten) ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಸತತ ಮೂರು ವರ್ಷಗಳಿಂದ ಚೀನಾದ ಶಿಶು ವಿಹಾರ ಕೇಂದ್ರಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಚೀನಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದರಿಂದ ದೇಶಾದ್ಯಂತ ಶಿಶು ವಿಹಾರ ಕೇಂದ್ರಗಳಿಗೆ ಮಕ್ಕಳ ದಾಖಲಾತಿಯು ತೀವ್ರವಾಗಿ ಕುಸಿತವಾಗುತ್ತಿದೆ. ಇದರಿಂದ ಸಾವಿರಾರು ಶಿಶುವಿಹಾರಗಳನ್ನು ಮುಚ್ಚಲಾಗಿದೆ ಎಂದು ಅಧಿಕೃತ ವರದಿಯೊಂದು ತಿಳಿಸಿದೆ.
2023ರಲ್ಲಿ ಶಿಶುವಿಹಾರಗಳ ಸಂಖ್ಯೆಯು 2,74,400ರಿಂದ 14,808ರಷ್ಟು ಕಡಿಮೆಯಾಗಿದೆ. ಚೀನಾದ ಜನನ ದರಗಳ ಕುಸಿತದ ಇತ್ತೀಚಿನ ಸೂಚಕದಲ್ಲಿ ಇದು ಸತತ ಎರಡನೇ ವಾರ್ಷಿಕ ಕುಸಿತವಾಗಿದೆ ಎಂದು ಚೀನಾದ ಶಿಕ್ಷಣ ಸಚಿವಾಲಯದ ವಾರ್ಷಿಕ ವರದಿ ಹೇಳಿದೆ.
ಶಿಶುವಿಹಾರಕ್ಕೆ ದಾಖಲಾದ ಮಕ್ಕಳ ಸಂಖ್ಯೆ ಸತತ ಮೂರನೇ ವರ್ಷವೂ ಕುಸಿದಿದೆ. ಕಳೆದ ವರ್ಷ ಶೇ. 11.55 ಅಂದರೆ ಸುಮಾರು 5.35 ಕೋಟಿ ಕುಸಿತವಾಗಿದೆ. ಕಳೆದ ವರ್ಷ ಮಕ್ಕಳ ಸಂಖ್ಯೆ 40.9 ಕೋಟಿ ಆಗಿತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.
ಪ್ರಾಥಮಿಕ ಶಾಲೆಗಳ ಸಂಖ್ಯೆಯು 2023 ರಲ್ಲಿ1,43,500ರಲ್ಲಿ 5,645 ರಷ್ಟು ಕಡಿಮೆಯಾಗಿದ್ದು, ಶೇ. 3.8ರಷ್ಟು ಕುಸಿತವಾಗಿದೆ. ಈ ಕುಸಿತವು ಚೀನಾದಲ್ಲಿ ವ್ಯಾಪಕವಾದ ಜನಸಂಖ್ಯಾ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಜನನ ದರದೊಂದಿಗೆ ಒಟ್ಟು ಜನಸಂಖ್ಯೆಯು ಕ್ಷೀಣಿಸುತ್ತಿದೆ. ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಇದು ಗಂಭೀರ ಅಪಾಯವನ್ನುಂಟು ಮಾಡುತ್ತದೆ.
ಸತತ ಎರಡು ವರ್ಷಗಳಲ್ಲಿ ಚೀನಾದ ಜನಸಂಖ್ಯೆ 1.4 ಶತಕೋಟಿಗೆ ಇಳಿದಿದೆ. 2023ರಲ್ಲಿ ಚೀನಾದಲ್ಲಿ ಕೇವಲ ಒಂಬತ್ತು ಕೋಟಿ ಜನನ ಪ್ರಮಾಣ ದಾಖಲಾಗಿದೆ. 1949ರಲ್ಲಿ ದಾಖಲೆಗಳು ಪ್ರಾರಂಭವಾದ ಬಳಿಕ ಇದು ಅತ್ಯಂತ ಕಡಿಮೆ ಜನನ ಪ್ರಮಾಣವಾಗಿದೆ.
ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ
ಜನನ ಪ್ರಮಾಣ ಕುಸಿಯುತ್ತಿರುವ ಪರಿಣಾಮ ಕಳೆದ ವರ್ಷ ಚೀನಾದ ಜನಸಂಖ್ಯೆಯನ್ನು ಭಾರತಕ್ಕೆ ಹಿಂದಿಕ್ಕಿತ್ತು. ಈ ಮೂಲಕ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ತನ್ನ ದೀರ್ಘಾವಧಿಯ ಸ್ಥಾನಮಾನವನ್ನು ಚೀನಾವು ಭಾರತಕ್ಕೆ ಬಿಟ್ಟುಕೊಟ್ಟಿದೆ.
ಚೀನಾ ಏಕಕಾಲಕ್ಕೆ ಎರಡು ರೀತಿಯ ತೊಂದರೆಯನ್ನು ಎದುರಿಸುತ್ತಿದೆ. ಒಂದೆಡೆ ಜನನ ದರಗಳು ಕಡಿಮೆಯಾಗುತ್ತಿದ್ದು, ಇನ್ನೊಂದೆಡೆ ಫಲವತ್ತತೆ ದರ ಕುಸಿತವಾಗುತ್ತಿದೆ. ಮತ್ತೊಂದೆಡೆ ವೃದ್ಧರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ.
ಏನು ಪರಿಣಾಮ?
60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಚೀನಾದ ಜನಸಂಖ್ಯೆಯು 2023ರ ಅಂತ್ಯದ ವೇಳೆಗೆ 30 ಕೋಟಿಗೆ ತಲುಪಿದೆ. ಇದು 2035 ರ ವೇಳೆಗೆ 40 ಕೋಟಿ ಮೀರಲಿದೆ ಮತ್ತು 2050 ರ ವೇಳೆಗೆ 50 ಕೋಟಿ ತಲುಪುವ ನಿರೀಕ್ಷೆ ಇದೆ.
ಹಿರಿಯ ನಾಗರಿಕರ ಆರೈಕೆಗಾಗಿ ಬದಲಾದ ಶಿಶುವಿಹಾರ ಕೇಂದ್ರ
ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಶಿಶುವಿಹಾರ ಕೇಂದ್ರಗಳನ್ನು ಹಿರಿಯ ನಾಗರಿಕರ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಅನೇಕ ಸಿಬ್ಬಂದಿಯ ಉದ್ಯೋಗಗಳನ್ನು ಬದಲಾಯಿಸಲಾಗಿದೆ.
ಮುಳುವಾದ ಒಂದು ಮಗುವಿನ ನೀತಿ
ಒಂದು ಮಗುವಿನ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದೇ ಈಗ ಚೀನಾದ ಪಾಲಿಗೆ ಮುಳುವಾಗಿದೆ. ಹೀಗಾಗಿ ವೃದ್ಧರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ರಾಜ್ಯದ ಹಣಕಾಸಿನ ಮೇಲೂ ಒತ್ತಡ ಉಂಟು ಮಾಡುತ್ತಿದೆ.
2016ರಲ್ಲಿ ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿದ್ದರೂ ಇದು ಹೆಚ್ಚಿನ ಪರಿಣಾಮವನ್ನು ಬೀರಿಲ್ಲ. ಹೆಚ್ಚುತ್ತಿರುವ ಜೀವನ ವೆಚ್ಚಗಳಿಂದಾಗಿ ದಂಪತಿ ಹೆಚ್ಚು ಮಕ್ಕಳನ್ನು ಹೊಂದಲು ಇಷ್ಟಪಡುತ್ತಿಲ್ಲ. ಸದ್ಯ ಚೀನಾದಲ್ಲಿ ಮೂರು ಮಕ್ಕಳನ್ನು ಹೊಂದಲು ಜನರಿಗೆ ಅವಕಾಶವಿದೆ.
English Channel: ಇಂಗ್ಲಿಷ್ ಕಾಲುವೆಯಲ್ಲಿ ಹಡಗು ಮುಳುಗಿ ದುರಂತ; ಭಾರತೀಯ ಪ್ರಜೆ ಸಾವು
ಪಿಂಚಣಿ ಮತ್ತು ವಯೋಸಹಜ ಆರೈಕೆಯ ವೆಚ್ಚಗಳು ಹೆಚ್ಚಾಗುತ್ತಿದ್ದಂತೆ ಚೀನಾ ಕಳೆದ ತಿಂಗಳು ಪುರುಷರ ನಿವೃತ್ತಿ ವಯಸ್ಸನ್ನು 60 ರಿಂದ 63ಕ್ಕೆ ಮತ್ತು ಮಹಿಳಾ ನೌಕರರಿಗೆ 55 ರಿಂದ 58 ವರ್ಷಕ್ಕೆ ಏರಿಸಿದೆ.