Wednesday, 9th October 2024

ಪ್ಯಾರಾ ಬ್ಯಾಡ್ಮಿಂಟನ್ ಟೀಂ ತಂಗಿದ್ದ ಹೋಟೆಲ್ ಬಳಿ ಸ್ಫೋಟ

ಉಗಾಂಡ : ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಉಳಿದುಕೊಂಡಿರುವ ಹೋಟೆಲ್​ ಸಮೀಪವೇ ತಡರಾತ್ರಿ ಎರಡು ಬಾಂಬ್ ಸ್ಫೋಟ ಸಂಭವಿಸಿದೆ.

ಇಂಟರ್​​ನ್ಯಾಷನಲ್​ ಪ್ಯಾರಾ ಬ್ಯಾಡ್ಮಿಂಟನ್​ 2021 ಟೂರ್ನಿಯಲ್ಲಿ ಪಾಲ್ಗೊಳ್ಳಲು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರು ಉಳಿದು ಕೊಂಡಿದ್ದ ಹೋಟೆಲ್ ಸಮೀಪ 100 ಮೀಟರ್ ಅಂತರದಲ್ಲಿ ಸ್ಪೋಟ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ತಂಡದಲ್ಲಿ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್ ಕಂಚಿನ ಪದಕ ವಿಜೇತ ಮನೋಜ್​ ಸರ್ಕಾರ್​, ಹಾಲಿ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಮಾನಸಿ ಜೋಶಿ ಇದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್​ ಟೂರ್ನಿ ನ. 16ರಿಂದ ಪ್ರಾರಂಭವಾಗಿದ್ದು 21ರವರೆಗೆ ನಡೆಯಲಿದೆ.