Monday, 16th September 2024

ಕ್ರಿಸ್‌ಮಸ್‌ ಹಬ್ಬದಂದು ಸ್ಪೋಟ: ನ್ಯಾಶ್‌ವಿಲ್ಲೆಯಲ್ಲಿ ಕರ್ಫ್ಯೂ ಜಾರಿ

ನ್ಯಾಶ್‌ವಿಲ್ಲೆ: ವಾಣಿಜ್ಯ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ವಾಹನ ಕ್ರಿಸ್‌ಮಸ್‌ ಹಬ್ಬದಂದು ಸ್ಪೋಟಗೊಂಡು, ಆತಂಕ ಸೃಷ್ಟಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಗುಂಡಿನ ದಾಳಿ ನಡೆದಿದೆ ಎಂಬ ವರದಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದೆವು. ಈ ವೇಳೆ ವಾಹನಯೊಂದರಲ್ಲಿ ಬಾಂಬ್‌ ಪತ್ತೆ ಯಾದ ಕಾರಣ ಹತ್ತಿರದ ಕಟ್ಟಡಗಳಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿದೆವು. ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಬರುವಷ್ಟರಲ್ಲಿ ವಾಹನದಲ್ಲಿದ್ದ ಬಾಂಬ್‌ ಸ್ಪೋಟಗೊಂಡಿದೆ’ ಎಂದು ಮೆಟ್ರೋ ನ್ಯಾಶ್‌ವೆಲ್‌ ಪೊಲೀಸ್‌ ಮುಖ್ಯಸ್ಥ ಜಾನ್‌ ಡ್ರೇಕ್‌ ತಿಳಿಸಿದರು.

‘ಜನರಲ್ಲಿ ಭಯ ಮತ್ತು ಗೊಂದಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಸಮುದಾಯದ ಮೇಲೆ ದಾಳಿ ನಡೆಸಲಾಗಿದೆ. ಆದರೆ ನಮ್ಮ ನಗರದ ಜನರಲ್ಲಿರುವ ಉತ್ಸಾಹವನ್ನು ಹಾಳು ಮಾಡಲು ಸಾಧ್ಯವಿಲ್ಲ’ ಎಂದು ಮೇಯರ್‌ ಪ್ರತಿಕ್ರಿಯಿಸಿದರು.

ಇದರ ಹಿಂದಿನ ಉದ್ದೇಶ ಅಥವಾ ಗುರಿಯ ಬಗ್ಗೆ ಇನ್ನೂ ತಿಳಿದಿಲ್ಲ. ಅಲ್ಲದೆ ಪೊಲೀಸರಿಗೆ ದಾಳಿಗೂ ಮುನ್ನ ಯಾವುದೇ ರೀತಿಯ ಬೆದರಿಕೆ ಕರೆಗಳು ಕೂಡ ಬಂದಿಲ್ಲ. ಈ ದಾಳಿಯಲ್ಲಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ. ಈ ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *