ಕಠ್ಮಂಡು: ಕನಿಷ್ಠ 40 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ನೇಪಾಳ ದೇಶದ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಬಿದ್ದು 14 ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶ ಎಫ್ ಟಿ 7623 ಸಂಖ್ಯೆಯ ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದಿದ್ದು ಬಸ್ ನ್ನು ನದಿ ದಂಡೆಗೆ ಮೇಲಕ್ಕೆತ್ತಿ ತರಲಾಗಿದೆ.
ಪೋಖರಾದಿಂದ ಕಠ್ಮಂಡುವಿಗೆ ಬಸ್ ಪ್ರಯಾಣಿಸುತ್ತಿತ್ತು ಎಂದು ತನಾಹುನ್ ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ವ್ಯಕ್ತಿಗಳು ಯಾರಾದರೂ ಬಸ್ಸಿನಲ್ಲಿದ್ದರೇ ಎಂದು ನಾವು ಸಂಪರ್ಕಿಸಿ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಉತ್ತರ ಪ್ರದೇಶ ಪರಿಹಾರ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಸದ್ಯ 16 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸ ಲಾಗುತ್ತಿದೆ.
ಕಳೆದ ತಿಂಗಳು 65 ಮಂದಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬಸ್ ನೇಪಾಳದ ತ್ರಿಶುಲಿಯಲ್ಲಿ ನದಿಯಲ್ಲಿ ಕೊಚ್ಚಿ ಹೋಗಿತ್ತು.