ಟೊರೆಂಟೊ: ಕಳೆದ ತಿಂಗಳು ವಾಲ್‌ಮಾರ್ಟ್ ಸ್ಟೋರ್‌ನ ಬೇಕರಿ ವಿಭಾಗದ ವಾಕ್-ಇನ್ ಓವನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಗುರ್ಸಿಮ್ರಾನ್ ಕೌರ್ ಅವರ ಸಾವಿನ ಕುರಿತು ಕೆನಡಾ ಪೊಲೀಸರು (Canada police) ಸೋಮವಾರ ತಮ್ಮ ತನಿಖೆಯನ್ನು ಮುಕ್ತಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ನಡೆಸಿರುವ ಅವರು ಕೊಲೆ ಎಂದು ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. (Canada Horror).
ಈ ಬಗ್ಗೆ ಮಾತನಡಿದ ಹ್ಯಾಲಿಫ್ಯಾಕ್ಸ್ ಪೊಲೀಸರು, ಸಂಪೂರ್ಣವಾಗಿ ತನಿಖೆ ನಡೆಸಿದ್ದೇವೆ. ಆದರೆ ಈ ಘಟನೆ ಕೊಲೆ ಎಂದು ಹೇಳಲು ಒಂದೂ ಪುರಾವೆಗಳು ದೊರೆತಿಲ್ಲ. ಇದೊಂದು ಆಕಸ್ಮಿಕ ಸಾವಾಗಿರಬಹುದು. ತನಿಖೆ ಸಂಬಂಧ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರನ್ನೂ ವಿಚಾರಣೆ ಮಾಡಲಾಗಿದೆ. ಮಾರ್ಟ್‌ನಲ್ಲಿದ್ದ ಪ್ರತಿಯೊಂದು ಸಿಸಿಟಿವಿಯನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಕೂಡ ಹಂಚಿಕೊಳ್ಳಲಾಗಿದೆ.
Statement on Sudden Death Investigation pic.twitter.com/0IsyAfMkzX
— Halifax_Police (@HfxRegPolice) November 18, 2024
ಘಟನೆಯೇನು?
ಅಕ್ಟೋಬರ್ 23ರಂದು, ಕೆನಡಾದ ಹ್ಯಾಲಿಫ್ಯಾಕ್ಸ್ ಪ್ರದೇಶದಲ್ಲಿರುವ ವಾಲ್‌ಮಾರ್ಟ್‌ನಲ್ಲಿ 19 ವರ್ಷದ ಭಾರತೀಯ ಮೂಲದ ಯುವತಿ ಗುರ್ಸಿಮ್ರಾನ್ ಕೌರ್ ಮೃತಪಟ್ಟಿದ್ದಳು. ಆಕೆಯ ಮೃತದೇಹ ಮಾರ್ಟ್‌ನ ಓವನ್‌ನಲ್ಲಿ ಪತ್ತೆಯಾಗಿತ್ತು. ಆಕೆ ಇತ್ತೀಚೆಗೆ ಭಾರತದಿಂದ ಕೆನಡಾಕ್ಕೆ ತೆರಳಿದ್ದು ತಮ್ಮ ತಾಯಿಯ ಜತೆ ವಾಸವಾಗಿದ್ದಳು. ಆಕೆಯ ತಂದೆ ಹಾಗೂ ಸಹೋದರ ಭಾರತದಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ವೈರಲ್ ಆದ ವಿಡಿಯೋ ಒಂದರಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಓವನ್ ಬಳಿ ಹೋಗಿ ಪರಿಶೀಲಿಸಿ ತಾನು ಒಳ್ಳಹೊಕ್ಕಲು ಸಾಧ್ಯವೇ ಎಂದು ಪರೀಕ್ಷೆ ಮಾಡಿದ್ದ ನಂತರ ಆತ ಒಳಗಿನಿಂದ ತನ್ನನ್ನು ತಾನು ಲಾಕ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿಂದ ಆರಾಮಾಗಿ ಹೊರ ಬರಬಹುದು ಎಂದು ಹೇಳಿದ್ದ ಹಾಗೂ ಒಲೆಯಲ್ಲಿ ತುರ್ತು ಬೀಗವಿದೆ ಮತ್ತು ಕೆಲಸಗಾರನಿಗೆ ದೈಹಿಕವಾಗಿ ಒಲೆಯಲ್ಲಿ ಪ್ರವೇಶಿಸಲು ಅಗತ್ಯವಿರುವ ಯಾವುದೇ ಕಾರ್ಯಗಳಿಲ್ಲ ಎಂದು ಸೂಚಿಸಿದ್ದ. ಆದರೆ ಪೊಲೀಸ್ ತನಿಖೆಯಲ್ಲಿ ಯಾವುದೇ ಕೊಲೆಯಲ್ಲ ಆಕಸ್ಮಿಕ ಸಾವು ಇಲ್ಲವೇ ಆತ್ಮಹತ್ಯೆ ಎಂದು ಹೇಳಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಇದನ್ನೂ ಓದಿ : Hindu Janajagruti Samiti: ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ; ಕಠಿಣ ಕ್ರಮಕ್ಕೆ ಆಗ್ರಹ
ಕಾರು ಅಪಘಾತದಲ್ಲಿ ನಾಲ್ವರು ಸಾವು
ಡಿವೈಡರ್‌ಗೆ ಟೆಸ್ಲಾ(Tesla Car) ಕಾರು ಡಿಕ್ಕಿಯಾಗಿ ಕಾರಿಗೆ ಬೆಂಕಿ ತಗುಲಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಭಾರತೀಯರು ಮೃತಪಟ್ಟ ಘಟನೆ ಕೆನಡಾದ( Canada) ಟೊರೆಂಟೋ(Toronto) ಬಳಿ ಇತ್ತೀಚೆಗೆ ನಡೆದಿತ್ತು . ಮೃತರು ಭಾರತೀಯ ಮೂಲದವರಾಗಿದ್ದು, ಮೃತರ ಪೈಕಿ ಇಬ್ಬರನ್ನು ಗೋಧ್ರಾದ ಕೇತಿ ಗೋಹಿಲ್ (30) ಹಾಗೂ ನಿಹಿಲ್ ಗೋಹಿಲ್ (26) ಎಂದು ಗುರುತಿಸಲಾಗಿದೆ. ಕೆನಡಾದ ಟೊರೆಂಟೋ ಬಳಿ ಈ ಅಪಘಾತ ನಡೆದಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡಿದ ಪರಿಣಾಮ ಕಾರಿನಲ್ಲಿ ಬೆಂಕಿ ತಗುಲಿ ಕಾರಿನ ಒಳಗಿದ್ದ ಪ್ರಯಾಣಿಕರು ಮೃತಪಟ್ಟಿದ್ದರು.