ಒಟ್ಟಾವಾ: ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಕೆನಡಾದ ಶಾಸಕ ನಗ್ನವಾಗಿ ಕಾಣಿಸಿಕೊಂಡು ಮುಜುಗರ ಕ್ಕೀಡಾದರು.
ವರ್ಚುವಲ್ ಅಧಿವೇಶನದ ವೇಳೆ ಲ್ಯಾಪ್‌ಟಾಪ್ ಕ್ಯಾಮೆರಾ ಆನ್ ಆಗಿದ್ದಾಗ ಕ್ವಿಬೆಕ್ ಮತ್ತು ಕೆನಡಾದ ಧ್ವಜಗಳ ನಡುವೆ ಲಿಬರಲ್ ಸಂಸದ ವಿಲಿಯಂ ಅಮೋಸ್ ಬೆತ್ತಲಾಗಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫೋಟೋದಲ್ಲಿ ವಿಲಿಯಂ ಖಾಸಗಿ ಅಂಗವನ್ನು ಮುಚ್ಚಿ ಕೊಂಡಿದ್ದರು.
ನಾನು ನಿಜವಾಗಿಯೂ ದುರದೃಷ್ಟಕರ ತಪ್ಪು ಮಾಡಿದ್ದೇನೆ. ಅದರಿಂದ ಮುಜುಗರಕ್ಕೊಳಗಾಗಿದ್ದೇನೆ ಎಂದು 46 ವರ್ಷದ ವಿಲಿಯಂ ತಿಳಿಸಿದ್ದಾರೆ.
ಜಾಗಿಂಗ್ ಹೋಗುವ ಸಲುವಾಗಿ ಕೆಲಸದ ಬಟ್ಟೆಯನ್ನು ಬದಲಾಯಿಸಿದ್ದೆ. ಆದರೆ ಕ್ಯಾಮೆರಾ ಆನ್ ಆಗಿದ್ದನ್ನು ಮರೆತಿದ್ದೆ. ಸದನದಲ್ಲಿನ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಕ್ಷಮೆಯಾಚಿಸುತ್ತೇನೆ. ಇಂತಹ ಘಟನೆ ಮುಂದೆ ಸಂಭವಿಸುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ