ಈ ಮೂಲಕ 26 ಪುಟಗಳ ತೀರ್ಪಿನಲ್ಲಿ, ನ್ಯಾಯಾಧೀಶರು ತನ್ನ ನೆರೆಹೊರೆಯವರಿಗೆ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ವಜಾ ಗೊಳಿಸಿದರು. ಯಾರಿಗಾದರೂ ಬೆರಳನ್ನು ತೋರುವುದು ಅಪರಾಧವಲ್ಲ. ಇದು ಕೆನಡಿಯನ್‌ಗೆ ಸೇರಿರುವ ಹಕ್ಕು ಎಂದು ಅವರು ಕೆನಡಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಚಾರ್ಟರ್ ಅನ್ನು ಉಲ್ಲೇಖಿಸಲಾಗಿದೆ.
ಶಿಕ್ಷಕ ಹಾಗೂ ಇಬ್ಬರು ಮಕ್ಕಳ ತಂದೆಯಾಗಿರುವ ಆರೋಪಿ ನೀಲ್ ಎಪ್ಸ್ಟೀನ್ ತನ್ನ ನೆರೆಹೊರೆಯವರ ವಿರುದ್ಧ ಕೊಲೆ ಬೆದರಿಕೆ ಮತ್ತು ಕ್ರಿಮಿನಲ್ ಕಿರುಕುಳವನ್ನು ನೀಡಿದ್ದಕ್ಕಾಗಿ 2021 ರ ಮೇ ತಿಂಗಳಲ್ಲಿ ಪೊಲೀಸರು ಬಂಧಿಸಿ ದ್ದರು.
ʻಮಧ್ಯ ಬೆರಳು ತೋರಿಸುವುದು ಸಭ್ಯವಾಗಿರದಿರಬಹುದು. ಅದು ಸಜ್ಜನಿಕೆಯಲ್ಲದಿರಬಹುದು. ಅದೇನೇ ಇದ್ದರೂ, ಇದು ಕ್ರಿಮಿನಲ್ ಹೊಣೆಗಾರಿಕೆ ಯನ್ನು ಪ್ರಚೋದಿಸುವುದಿಲ್ಲʼ ಎಂದು ಗಲಿಯಾಟ್ಸಾಟೋಸ್ ತೀರ್ಪು ನೀಡಿದರು.