Saturday, 14th December 2024

ಭಾರತ ವಿರೋಧಿ ಗೋಡೆ ಬರಹ: ಹಿಂದೂ ದೇವಾಲಯ ಧ್ವಂಸ

ಕೆನಡಾ: ಕೆನಡಾದ ಬ್ರಿಟೀಷ್ ಕೊಲಂಬಿಯಾದಲ್ಲಿರುವ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೋಡೆ ಬರಹ ಧ್ವಂಸಗೊಳಿಸಲಾಗಿದೆ. ಶನಿವಾರ ಮಧ್ಯ ರಾತ್ರಿ, ಖಲಿಸ್ತಾನ್ ಜನಮತಗಣನೆಯ ಪೋಸ್ಟರುಗಳನ್ನು ದೇವಾಲಯದ ಮುಂಭಾಗದ ಪ್ರವೇಶದ್ವಾರಕ್ಕೆ ಅಂಟಿಸಲಾಗಿದೆ.

ಸರ್ರೆಯಲ್ಲಿರುವ ಹಿಂದೂ ದೇವಾಲಯವಾದ ಲಕ್ಷ್ಮಿ ನಾರಾಯಣ ಮಂದಿರವು ಬ್ರಿಟಿಷ್ ಕೊಲಂಬಿಯಾದ ಅತಿದೊಡ್ಡ ಮತ್ತು ಅತ್ಯಂತ ಐತಿಹಾಸಿಕ ದೇವಾಲಯ ಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನೇ ಇದೀಗ ಖಲಿಸ್ತಾನಿ ತೀವ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.

ಈ ಘಟನೆಯು ಭಾರತೀಯ ಸಮುದಾಯದಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿತು. ದ್ವೇಷದ ಘೋಷಣೆಗ ಳಿಂದ ದೇವಾಲಯದ ಗೋಡೆಗಳನ್ನು ವಿರೂಪ ಗೊಳಿಸಿರುವುದನ್ನು ಬ್ರಾಂಪ್ಟನ್ ಮೇಯರ್ ತೀವ್ರವಾಗಿ ಖಂಡಿ ಸಿದರು.

‘ಜೂನ್ 18ರ ಹತ್ಯೆಯಲ್ಲಿ ಭಾರತದ ಪಾತ್ರದ ಬಗ್ಗೆ ತನಿಖೆ ನಡೆಸಿ’ ಎಂದು ಹರ್ದೀಪ್ ಸಿಂಗ್ ನಿಜ್ಜರ್ ಅವರ ಭಾವಚಿತ್ರದೊಂದಿಗೆ ಪೋಸ್ಟರುಗಳಲ್ಲಿ ಬರೆಯಲಾಗಿತ್ತು. ಈ ವರ್ಷ ಕೆನಡಾದಲ್ಲಿ ದೇವಾಲಯವನ್ನು ಧ್ವಂಸ ಗೊಳಿಸಿದ ಇದು ಮೂರನೇ ದೇವಾಲಯವಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರ ಸಾಹಿಬ್ನ ಮುಖ್ಯಸ್ಥರಾಗಿದ್ದರು. ಜೂನ್ 18 ರಂದು ಸಂಜೆ ಗುರುದ್ವಾರದ ಆವರಣದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ಹತ್ಯೆ ಮಾಡಿದ್ದರು. ಈತ ಪ್ರತ್ಯೇಕತಾವಾದಿ ಸಂಘಟನೆ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿದ್ದ.