Thursday, 12th December 2024

ಕಾರು ಅಪಘಾತ: ಉದ್ಯಮಿ ವಿಕಾಸ್ ಒಬೆರಾಯ್, ಪತ್ನಿ, ಮಾಜಿ ನಟಿ ಪಾರು

ಇಟಲಿ: ವಿಕಾಸ್ ಅವರು ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸುತ್ತಿದ್ದರು. ಓವರ್​ಟೇಕ್ ಮಾಡುವಾಗ ಎಡವಟ್ಟು ಸಂಭವಿಸಿದೆ. ವಿಕಾಸ್ ಇದ್ದ ಕಾರು ಪಲ್ಟಿ ಆಗಿ ರಸ್ತೆಯಿಂದ ಕೆಳಕ್ಕೆ ಬಿದ್ದಿದೆ. ಆದರೆ, ಇಬ್ಬರೂ ಸೇಫ್ ಆಗಿದ್ದಾರೆ.

ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಂಬೈನ ಉದ್ಯಮಿ ವಿಕಾಸ್ ಒಬೆರಾಯ್ ಹಾಗೂ ಅವರ ಪತ್ನಿ, ಮಾಜಿ ನಟಿ ಗಾಯತ್ರಿ ಜೋಶಿ ಅವರು ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಮತ್ತೊಂದು ಕಾರಿನಲ್ಲಿ ಇದ್ದ ಇಬ್ಬರು ಮೃತಪಟ್ಟಿ ದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಾಯತ್ರಿ ಜೋಶಿ ಅವರು 2004ರಲ್ಲಿ ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಸ್ವದೇಶ್’ ಚಿತ್ರದಲ್ಲಿ ನಟಿಸಿದರು. ಅವರು ಅಭಿನಯಿಸಿದ ಏಕೈಕ ಸಿನಿಮಾ ಇದು. ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯತ್ರಿ 2005ರಲ್ಲಿ ವಿಕಾಸ್ ಅವರನ್ನು ವರಿಸಿದರು.

ಸಾಲು ಸಾಲು ಸ್ಪೋರ್ಟ್ಸ್​ಕಾರುಗಳು ರಸ್ತೆಯಲ್ಲಿ ಸಾಗುತ್ತಿದ್ದವು. ವಿಕಾಸ್ ಅವರು ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸುತ್ತಿದ್ದರು. ಓವರ್​ಟೇಕ್ ಮಾಡು ವಾಗ ಎಡವಟ್ಟು ಸಂಭವಿಸಿದೆ. ವಿಕಾಸ್ ಇದ್ದ ಕಾರು ಪಲ್ಟಿ ಆಗಿ ರಸ್ತೆಯಿಂದ ಕೆಳಕ್ಕೆ ಬಿದ್ದಿದೆ.

ಕಿರಿದಾದ ರಸ್ತೆಯಲ್ಲಿ ವಾಹನಗಳು ಸಾಗುತ್ತಿತ್ತು. ಮುಂದಿದ್ದ ವ್ಯಾನ್ ಹಿಂದಿಕ್ಕಲು ಕೆಂಪು ಬಣ್ಣದ ಫೆರಾರಿ ಕಾರಿನವರು ಪ್ರಯತ್ನಿಸಿದ್ದರು. ಆಗ ಲ್ಯಾಂಬೋ ರ್ಗಿನಿಗೆ ಫೆರಾರಿ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಫೆರಾರಿಯಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ.