Thursday, 12th December 2024

ಅಮೆರಿಕದ ಕೊವಿಡ್ ಟಾಸ್ಕ್‌ಫೋರ್ಸ್‌ನ ಸಲಹಾ ಸಮಿತಿಗೆ ಭಾರತೀಯ ವನಿತೆ

ವಾಷಿಂಗ್ಟನ್: ಭಾರತ ಮೂಲದ ವೈದ್ಯೆ ಸೆಲೈನ್ ಗೌಂಡರ್ ಅವರನ್ನು ಅಮೆರಿಕದ ಕೊವಿಡ್ 19 ಟಾಸ್ಕ್‌ಫೋರ್ಸ್‌ನ ಸಲಹಾ ಸಮಿತಿಗೆ ನೇಮಿಸಲಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಜಯಗಳಿಸಿದ್ದು, ಭಾರತದ ಪಾಲಿಗೆ ಅದರಲ್ಲೂ ದಕ್ಷಿಣ ಭಾರತಕ್ಕೆ ಹಲವು ಸಂತಸಗಳನ್ನು ಹೊತ್ತು ತರಲಿರುವುದು ವಿಶೇಷ.

ಸೆಲೈನ್ ಅವರ ತಂದೆ ರಾಜ ನಟರಾಜನ್ ಗೌಂಡರ್ ತಮಿಳುನಾಡಿನ ಮೊದಕುರಿಚಿ ಬಳಿಯ ಪೆರುಮಪಾಳಯಂದವರಾಗಿದ್ದಾರೆ. 1960ರಲ್ಲಿ ಕುಟುಂಬ ಅಮೆರಿಕಕ್ಕೆ ವಲಸೆ ಬಂದಿತ್ತು. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ತಮಿಳುನಾಡಿನ ಮೂಲದ ಕಮಲಾ ಹ್ಯಾರಿಸ್ ಕುರಿತು ಸಂಭ್ರಮದಲ್ಲಿರುವಾಗಲೇಷ ಬೈಡನ್ ವ್ಯವಸ್ಥೆಯಲ್ಲಿ ಮತ್ತೋರ್ವ ಭಾರತೀಯ ಮೂಲದವರಿಗೆ ಅವಕಾಶ ದೊರೆತಿದೆ.

ಸಲೈನ್ ಅವರು ಅಮೆರಿಕದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸಲೈನ್ ಅವರು ಇಂದಿಗೂ ತನ್ನ ಹಳ್ಳಿ ಜೊತೆ ಸಂಪರ್ಕ ಹೊಂದಿದ್ದು, ರಾಜ್ ಗೌಂಡರ್ ಪ್ರತಿಷ್ಠಾನ ಮೂಲಕ ಸ್ಥಳೀಯ ಸರ್ಕಾರಿ ಮಾಧ್ಯ ಮಿಕ ಶಾಲೆಗೆ ನೆರವು ನೀಡುತ್ತಿದ್ದಾರೆ.