Thursday, 12th December 2024

ಈ ಮಗುವಿಗೆ ಮೈ, ಮುಖದ ತುಂಬಾ ದಟ್ಟ ಕೂದಲು..!

ಫಿಲಿಪ್ಪೀನ್ಸ್: ಇಲ್ಲೊಂದು ಮಗುವಿಗೆ ಮೈ ಹಾಗೂ ಮುಖದ ತುಂಬಾ ದಟ್ಟವಾದ ಕೂದಲು ಬೆಳೆದಿದ್ದು, ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಇದಕ್ಕೆ ಕಾರಣ ಎಂದು ಮಗುವಿನ ತಾಯಿ ಹೇಳಿಕೆ ನೀಡಿದ್ದಾರೆ.

ಮಗುವಿಗೆ ದೇಹ ಹಾಗೂ ಮುಖದ ತುಂಬಾ ದಟ್ಟವಾಗಿ ಕೂದಲು ಬೆಳೆದಿದೆ. ಗರ್ಭಾವಸ್ಥೆಯಲ್ಲಿ ನಾನು ಕಾಡು ಬೆಕ್ಕಿನ ಮಾಂಸ  ತಿಂದಿದ್ದೇ, ನನ್ನ ಮಗ ಈ ಪರಿಸ್ಥಿತಿಗೆ ಬರಲು ಕಾರಣವೆಂದು ಮಗುವಿನ ತಾಯಿ ಹೇಳಿದ್ದಾರೆ. ಈ ಘಟನೆ ಫಿಲಿಪ್ಪೀನ್ಸ್ ಅಲ್ಲಿ ನಡೆದಿದ್ದು, ಜರೆನ್ ಎಂಬ ಎರಡು ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ. ಇದಕ್ಕೆ ಕಾರಣ ʼವೆರ್ವುಲ್ಫ್ ಸಿಂಡ್ರೋಮ್ʼ.

ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇಹದಾದ್ಯಂತ ಕೂದಲು ಬೆಳೆಯುತ್ತದೆ. ಆದರೆ ನನ್ನ ಮಗನ ಈ ಸ್ಥಿತಿಗೆ ಗರ್ಭಿಣಿಯಾಗಿ ದ್ದಾಗ ನಾನು ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎಂದು ಜರೆನ್ ನ ತಾಯಿ ಅಲ್ಮಾ ಗಮೊಂಗನ್ ಹೇಳಿದ್ದಾರೆ.

ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನುವ ಬಯಕೆ ಉಂಟಾಗಿ, ಕಾಡು ಬೆಕ್ಕಿನ ಮಾಂಸ ತರಿಸಿ, ಅದನ್ನು ಪದಾರ್ಥ ಮಾಡಿ ತಿಂದು ತನ್ನ ಗರ್ಭಿಣಿ ಬಯಕೆ ಈಡೇರಿಸುತ್ತಾಳೆ.

ಆದರೆ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ ಎಂದು ಅಲ್ಮಾ ಅವರನ್ನು ವೈದ್ಯರು ಸಮಧಾನ ಪಡಿಸಿದ್ದಾರೆ.

ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿವೆ ಎಂದು ಡಾ. ರಾವೆಲಿಂಡಾ ಹೇಳಿದ್ದಾರೆ.