Saturday, 27th July 2024

ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್​ ಹೃದಯಾಘಾತ ನಿಧನ

ಬೀಜಿಂಗ್: ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿದ್ದ ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್(68)​ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾದ ಅವರು ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. 2013 ರಿಂದ 10 ವರ್ಷಗಳ ಕಾಲ ಚೀನಾದ ಪ್ರಧಾನಿ ಯಾಗಿ ಸೇವೆ ಸಲ್ಲಿಸಿರುವ ಲಿ ಕೆಕಿಯಾಂಗ್​, ಈ ವರ್ಷದ ಮಾರ್ಚ್​ನಲ್ಲಿ ಲಿ ಕೆಕಿಯಾಂಗ್​ ಕಾರ್ಯಭಾರ ದಿಂದ ಕೆಳಗಿಳಿದಿದ್ದರು. ಲಿ ಕೆಕಿಯಾಂಗ್​ ಅವರ ನಾಯಕತ್ವದ ಒಂದು ದಶಕದಲ್ಲಿ ಚೀನಾದ ಆರ್ಥಿಕತೆಯ ಬೆಳವಣಿಗೆ ದ್ವಿಗುಣಗೊಂಡಿತ್ತು.

ಪಡೆಯುತ್ತಿದ್ದರು. 2013 ರಿಂದ 23ರವೆರೆಗೆ ಚೀನಾದ ನಂ.2ನೇ ನಾಯಕರಾಗಿದ್ದರು. ಚೀನಾದ ಮಾಜಿ ಪ್ರೀಮಿಯರ್ ಲಿ ಕೆಕಿಯಾಂಗ್ ಅವರು ಇಂಗ್ಲಿಷ್ ಮಾತನಾಡುವ ಅರ್ಥಶಾಸ್ತ್ರಜ್ಞರಾಗಿದ್ದರು.

ಸುಧಾರಣಾವಾದಿ ಎಂದು ಕರೆಯಲ್ಪಡುವ ಲಿ ಕೆಕಿಯಾಂಗ್​ ಅವರು ತಮ್ಮ ದೇಸದ ಹಿಂದುಳಿದವರಿಗಾಗಿ ಮಾಡಿದ ಕೆಲಸಗಳಿಗಾಗಿ ಅವರು ಪ್ರಸಿದ್ಧ ರಾಗಿದ್ದಾರೆ.

ಕಾನೂನು ಪದವಿ ಹಾಗೂ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದಿರುವ ಲಿ ಕೆಕಿಯಾಂಗ್​ ಅವರು ಮಾವೋ ಝೆಡಾಂಗ್​ ಚಿಂತನೆಯ ಅಧ್ಯಯನದಲ್ಲಿ ಪೀಕಿಂಗ್​ ವಿಶ್ವವಿದ್ಯಾಲಯದಲ್ಲಿ ಉತ್ತಮ ಸಾಧನೆ ಮಾಡಿದ್ದರು.

ಪೀಕಿಂಗ್​ ವಿಶ್ವವಿದ್ಯಾಲಯದ ವಿದ್ಯಾವಂತ ಅರ್ಥಶಾಸ್ತ್ರಜ್ಞ ಎನಿಸಿಕೊಂಡಿರುವ ಲಿ ಕೆಕಿಯಾಮಗ್​ ಆಗಿನ ಕಮ್ಯುನಿಸ್ಟ್​ ಪಕ್ಷದ ನಾಯಕ ಹು ಜಿಂಟಾವೊ ಅವರ ಉತ್ತರಾಧಿಕಾರಿಯಾಗಲು ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದರು.

ಅನೌಪಚಾರಿಕ ನಿವೃತ್ತಿ ವಯಸ್ಸು 70ಕ್ಕಿಂತ ಲಿ ಕೆಕಿಯಾಂಗ್​ ಅವರಿಗೆ ಎರಡು ವರ್ಷ ಕಡಿಮೆ ಇದ್ದರೂ, 2022ರ ಅಕ್ಟೋಬರ್​ನಲ್ಲಿ ನಡೆದ ಪಕ್ಷ ಮೀಟಿಂಗ್​ನಲ್ಲಿ ಲಿ ಅವರಲ್ಲಿ ಸ್ಥಾಯಿ ಸಮಿತಿಯಿಂದ ಕೈ ಬಿಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!