ಟೋಕಿಯೊ: ಜಪಾನ್ ನ ಜನವಸತಿ ಇಲ್ಲದ ದ್ವೀಪವೊಂದನ್ನು ಚೀನಾದ ಮಹಿಳೆ ಖರೀದಿಸಿರುವುದು ಬೆಳಕಿಗೆ ಬಂದಿದ್ದು ಇದು ಅಪಾಯದ ಸಂದೇಶ ರವಾನಿಸಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ.
ಒಕಿನಾವಾ ಪ್ರಾಂತದ ಆಡಳಿತ ವ್ಯಾಪ್ತಿಗೆ ಬರುವ ಜನವಸತಿ ಇಲ್ಲದ ಯನಾಹಾ ದ್ವೀಪವನ್ನು ಚೀನಾದ ಮಹಿಳೆ ಖರೀದಿಸಿದ್ದು, ಆಕೆ ಇತ್ತೀಚೆಗೆ ದ್ವೀಪಕ್ಕೆ ಭೇಟಿ ನೀಡಿ ಇಲ್ಲಿಯ ಫೋಟೋ ತೆಗೆದಿದ್ದಾಳೆ ಹಾಗೂ ವೀಡಿಯೊ ರೆಕಾರ್ಡ್ ಮಾಡಿದ್ದಾಳೆ ಎಂದು ವರದಿ ಮಾಡಿದೆ.
ಈ ದ್ವೀಪದ 50% ಪ್ರದೇಶ ಟೋಕಿಯೊ ಮೂಲದ ಸಂಸ್ಥೆಯ ಅಧೀನದಲ್ಲಿದೆ. ಉಳಿದ ಪ್ರದೇಶವನ್ನು ಚೀನಾದ ಮಹಿಳೆ ಖರೀದಿಸಿದ್ದಾಳೆ ಎಂದು ವರದಿ ಯಾಗಿದೆ.