Tuesday, 10th September 2024

ಭೂಕಂಪನ ಕುರಿತು ಅಪಹಾಸ್ಯ: ಚೀನಾದ ಟಿವಿ ಶೋ ನಿರೂಪಕ ಅಮಾನತು

ಬೀಜಿಂಗ್: ಜಪಾನ್ ನಲ್ಲಿ ಸಂಭವಿಸಿದ ಮಾರಣಾಂತಿಕ ಭೂಕಂಪನ(ಜನವರಿ 1)ದ ಬಗ್ಗೆ ಅಪಹಾಸ್ಯ ಮಾಡಿದ ಚೀನಾದ ಟಿವಿ ಶೋ ನಿರೂಪಕನನ್ನು ಅಮಾನತು ಮಾಡಲಾಗಿದೆ.

ಟಿವಿ ಚಾನೆಲ್ `ಹೆನಾನ್ ಬ್ರಾಡ್ಕಾಸ್ಟಿಂಗ್’ನಲ್ಲ` ವಿಧಿಲಿಖಿತ 7.4 ತೀವ್ರತೆಯ ಭೂಕಂಪ ಜಪಾನ್ ಗೆ ಅಪ್ಪಳಿಸಿದೆ’ ಎಂಬ ಶೀರ್ಷಿಕೆಯ ಕಾರ್ಯಕ್ರಮ ಪ್ರಸಾರವಾಗಿತ್ತು.

ಕಾರ್ಯಕ್ರಮ ನಿರೂಪಿಸಿದ ಕ್ಸಿಯಾವೊ ಚೆಂಘಾವೊ `ಹೊಸ ವರ್ಷದ ಆರಂಭದ ದಿನವೇ ಈ ರೀತಿಯ ಪ್ರಬಲ ಭೂಕಂಪ ಜಪಾನ್ ಗೆ ಅಪ್ಪಳಿಸಿರುವುದು ನನಗಂತೂ ಅಚ್ಚರಿ ತಂದಿದೆ. ಈ ವರ್ಷವಿಡೀ ಜಪಾನ್ ಗೆ ಇಂತಹ ಇನ್ನಷ್ಟು ಕಾರ್ಮೋಡಗಳು ಆವರಿಸಬಹುದು. ಪರಮಾಣು ಸ್ಥಾವರದ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವಂತಹ ಕಾರ್ಯಗಳನ್ನು ಅವರು ಕಡಿಮೆ ಮಾಡಿದರೆ ಒಳಿತು’ ಎಂದು ವಿವರಣೆ ನೀಡಿದ್ದರು.

ಅನುಚಿತ ಪ್ರತಿಕ್ರಿಯೆಗಾಗಿ ಕ್ಸಿಯಾವೊ ಚೆಂಘಾವೊರನ್ನು ಅಮಾನತುಗೊಳಿಸಲಾಗಿದೆ. ಆದರೆ ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿಲ್ಲ ಎಂದು ಟಿವಿ ವಾಹಿನಿ ಹೇಳಿಕೆ ನೀಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗುತ್ತಿರುವಂತೆಯೇ, ಈ ಹೇಳಿಕೆಗೆ ಚೀನಾ ಸರಕಾರ ವಿಷಾದ ಸೂಚಿಸುತ್ತದೆ ಎಂದು ಚೀನಾದ ಪ್ರೀಮಿಯರ್ ಲಿ ಕ್ವಿಯಾಂಗ್ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *