ವಾಷಿಂಗ್ಟನ್: ಅಮೆರಿಕದ ಬ್ಯಾಂಕಿಂಗ್ ದೈತ್ಯ ಸಿಟಿಗ್ರೂಪ್ ನೂರಾರು ಉದ್ಯೋಗಿಗಳನ್ನ ವಜಾಗೊಳಿಸಲು ಸಿದ್ಧ ವಾಗಿದೆ.
ಕಂಪನಿಯ ಕಾರ್ಯಾಚರಣೆಗಳು, ತಂತ್ರಜ್ಞಾನ ಸಂಸ್ಥೆ ಮತ್ತು ಅಮೆರಿಕದ ಅಡಮಾನ ವಿಭಾಗಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಸಂಖ್ಯೆಯ ಉದ್ಯೋಗಿ ಗಳನ್ನು ವಜಾ ಮಾಡಲಿದೆ.
ಇನ್ನು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು 2,40,000 ಉದ್ಯೋಗಿಗಳಲ್ಲಿ ಇದು ಕೇವಲ ಒಂದು ಶೇಕಡಾ ಎಂದು ಹೇಳಲಾಗುತ್ತದೆ. ತಮ್ಮ ವಾರ್ಷಿಕ ಯೋಜನೆಯ ಭಾಗವಾಗಿ ವಜಾಗೊಳಿಸುವಿಕೆಯು ಸಾಮಾನ್ಯ ಪ್ರಕ್ರಿಯೆ ಯಾಗಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಒಂದೊಂದು ಇಲಾಖೆಯಲ್ಲಿಯೂ ಒಂದೊಂದು ಕಾರಣಕ್ಕೆ ನೌಕರರನ್ನ ಮನೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
120 ವರ್ಷಗಳ ಇತಿಹಾಸ ಹೊಂದಿರುವ ಸಿಟಿಬ್ಯಾಂಕ್ ಮುಂಚೂಣಿಯಲ್ಲಿರುವ ಖಾಸಗಿ ಬ್ಯಾಂಕ್ ಆಕ್ಸಿಕ್ ಜತೆ ವಿಲೀನಗೊಂಡಿರುವುದು ಗೊತ್ತಾಗಿದೆ. ಈ ತಿಂಗಳ 1 ರಂದು ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಿದೆ.