Friday, 22nd November 2024

ಸೋಂಕಿನ ತೀವ್ರತೆ ಕ್ಷೀಣ: ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಅಂತ್ಯ

ಟೊಕಿಯೊ: ಜಪಾನ್‌ ದೇಶದಾದ್ಯಂತ ಕರೋನಾ ಸೋಂಕು ನಿಯಂತ್ರಣಕ್ಕಾಗಿ ಆರು ತಿಂಗಳಿನಿಂದ ವಿಧಿಸಿದ್ದ ತುರ್ತು ಪರಿಸ್ಥಿತಿ ಅಂತ್ಯವಾಗಿದ್ದು, ನೂರಾರು ಮಂದಿ ನೌಕರರು ಉದ್ಯೋಗಕ್ಕಾಗಿ ತಮ್ಮ ಕಚೇರಿಗಳತ್ತ ತೆರಳಲಾರಂಭಿಸಿದ್ದಾರೆ.

ಸೋಂಕಿನ ತೀವ್ರತೆ ಕ್ಷೀಣಿಸಿರುವುದರಿಂದ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಸಂಬಂಧಿಸಿದ ಚಟುವಟಿಕೆ ಗಳನ್ನು ಸಕ್ರಿಯಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತುಪರಿಸ್ಥಿತಿಯನ್ನು ಅಂತ್ಯಗೊಳಿಸಿತು. ಆರು ತಿಂಗಳುಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಸಾವಿರಾರು ನೌಕರರು ತಮ್ಮ ತಮ್ಮ ಕಚೇರಿ ಗಳಿಗೆ ತೆರಳಲು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ಹೀಗಾಗಿ ನಗರದ ರೈಲ್ವೆ ನಿಲ್ದಾಣಗಳು ಮತ್ತು ಕಮ್ಯೂಟರ್ ರೈಲುಗಳು ಪ್ರಯಾಣಿಕರಿಂದ ತುಂಬಿಹೋಗಿದ್ದವು.

ಸೋಂಕು ನಿಯಂತ್ರಣಕ್ಕಾಗಿ ದೇಶದಾದ್ಯಂತ ವಿಧಿಸಿದ್ದ ತುರ್ತು ಪರಿಸ್ಥಿತಿ ಹಾಗೂ ನಿರ್ಬಂಧವನ್ನು ತೆರವುಗೊಳಿಸುತ್ತಿರುವುದಾಗಿ ಜಪಾನ್‌ ಪ್ರಧಾನಿ ಯೋಶಿಹಿಡೆ ಸುಗಾ ಕಳೆದ ಮಂಗಳವಾರ ಪ್ರಕಟಿಸಿದ್ದರು.