Sunday, 15th December 2024

ಮುಚ್ಚಿದ್ದ ಶವ ತೆಗೆದು ಅತ್ಯಾಚಾರ !

ಇಸ್ಲಾಮಾಬಾದ್: ಪುಟ್ಟ ಬಾಲಕಿಯೊಬ್ಬಳ ಶವ ತೆಗೆದು ಅತ್ಯಾಚಾರ ಮಾಡಿ ರುವ ಪ್ರಕರಣ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗುಜರಾತ್‌ನ ಚಕ್ ಕಮಲಾ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಹದಿಹರೆಯದ ಹುಡುಗಿಯ ಶವ ಅಗೆದು ಅತ್ಯಾಚಾರ ಮಾಡಿದ್ದಾರೆ.

17 ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ, ವೈಜ್ಞಾನಿಕ ವಿಧಾನಗಳ ಪ್ರಕಾರ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್ ಉಪ ಕಾರ್ಯದರ್ಶಿ ಅತ್ತಾವುಲ್ಲಾ ತರಾರ್ ತಿಳಿಸಿದ್ದಾರೆ.

ಮೃತ ಬಾಲಕಿಯ ಸಂಬಂಧಿಕರು ತಮ್ಮ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಮರುದಿನ ಸ್ಮಶಾನಕ್ಕೆ ಭೇಟಿ ನೀಡಿದಾಗ ಆಘಾತ ಕಾರಿ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಅಗೆದು ಮುಚ್ಚದೆ ಬಿಟ್ಟಿರುವುದನ್ನು ಸಂಬಂಧಿಕರು ಪತ್ತೆ ಮಾಡಿದ್ದಾರೆ.

ಮೃತ ಹದಿಹರೆಯದ ಬಾಲಕಿಯ ಚಿಕ್ಕಪ್ಪ ಪೊಲೀಸರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ಆಧರಿಸಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.