ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಡೆಂಘೀ ರೋಗ ದಿನ ಕಳೆದಂತೆ ಹಬ್ಬುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 10 ಮಂದಿ ದೇಶದ ವಿವಿಧೆಡೆ ಸಾವನ್ನಪ್ಪಿದ್ದಾರೆ.
ಒಟ್ಟು 2,495 ಡೆಂಘೀ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಬಾಂಗ್ಲಾದಲ್ಲಿ ಡೆಂಘೀ ಪ್ರಾರಂಭವಾದಂದಿ ನಿಂದ ಇಲ್ಲಿಯವರೆಗೆ 303 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 63,968 ಕ್ಕೇರಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ತಿಳಿಸಿದೆ.
ಜೂನ್-ಸೆಪ್ಟೆಂಬರ್ನ ಮಾನ್ಸೂನ್ ಅವಧಿಯು ಬಾಂಗ್ಲಾದಲ್ಲಿ ಡೆಂಘೀ ಜ್ವರದ ತಿಂಗಳುಗಳಾಗಿವೆ. ಹಾಗಾಗಿ, ದೇಶವನ್ನು ಸೊಳ್ಳೆ ಹರಡುವ ರೋಗಗಳಿಗೆ ಒಳಗಾಗುವ ಹೆಚ್ಚಿನ ಅಪಾಯದ ರಾಷ್ಟ್ರವೆಂದೂ ಪರಿಗಣಿಸ ಲಾಗಿದೆ. ಸಾಮಾನ್ಯ ಜ್ವರದಂತೆ ಕಾಣಿಸಿಕೊಳ್ಳುವ ಡೆಂಗ್ಯೂ ಅತಿಯಾದರೆ ಪ್ರಾಣವನ್ನೇ ತೆಗೆಯುತ್ತದೆ.
ವಿಶ್ವದ 40% ಜನರು ಡೆಂಘೀ ಹರಡುವ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 400 ಮಿಲಿಯನ್ ಜನರು ಇದೇ ಜ್ವರದಿಂದ ಬಳಲುತ್ತಾರೆ. 400 ಮಿಲಿಯನ್ ಜನರಲ್ಲಿ 100 ಮಿಲಿಯನ್ ಜನರ ಆರೋಗ್ಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. 22 ಸಾವಿರ ಜನ ಪ್ರತಿವರ್ಷ ಜ್ವರಕ್ಕೆ ಸಾವನ್ನಪ್ಪುತ್ತಿದ್ದಾರೆ.