Sunday, 15th December 2024

ಡೆನ್ಮಾರ್ಕ್​ನಲ್ಲಿ ಪುರುಷ ಉದ್ಯೋಗಿಗಳಿಗೆ 30 ದಿನಗಳ ಪಿತೃತ್ವ ರಜೆ

ಡೆನ್ಮಾರ್ಕ್: ಜಾಗತಿಕವಾಗಿ ನೂರಾರು ಕೋಟಿ ಡಾಲರ್​ ಹಣದ ವಹಿವಾಟು ಹೊಂದಿರುವ COWI​ ಎ/ಎಸ್​ ಜಾಗತಿಕ ಇಂಜಿನಿಯರಿಂಗ್ ಮತ್ತು ವಿನ್ಯಾಸ ಸಲಹಾ ಸಂಸ್ಥೆಯಾಗಿದೆ.

ಈ COWI​ ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ಮೊದಲ ಬಾರಿಗೆ ಪಿತೃತ್ವ ರಜೆ ನೀಡಲು ಮುಂದಾಗಿದೆ. ಭಾರತದಲ್ಲಿನ ಪುರುಷ ಉದ್ಯೋಗಿಗಳು ಮಗು ವಿನ ಜನನ ಅಥವಾ ದತ್ತು ಸ್ವೀಕಾರ ಸಮಯದಲ್ಲಿ 30 ದಿನಗಳ ಪಿತೃತ್ವ ರಜೆ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

COWI​​ ಸಂಸ್ಥೆ, ಭಾರತದಲ್ಲಿ ಮಗು ದತ್ತು ಸ್ವೀಕಾರ ಅಥವಾ ಜನನದ ವೇಳೆ ಅವರ ವೃತ್ತಿ ಮತ್ತು ಕೌಟುಂಬಿಕ ಜೀವನದ ಸಮತೋಲನ ಕಾಪಾಡಲು ವರ್ಷದ 12 ತಿಂಗಳ ಕಾಲ ಸಹಾಯ ಮಾಡಲಿದೆ.

ಭಾರತದಲ್ಲಿನ ಸಹೋದ್ಯೋಗಿಗಳು ಮತ್ತು ಅವರ ಕುಟುಂಬದವರ ಜೀವನದ ಸಮತೋಲನ ಕಾಪಾಡಲು ಹಾಗೂ ಗ್ರಾಹಕರು ಮತ್ತು ವ್ಯವಹಾರದ ಕಾರ್ಯಕ್ಷಮತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಇದು ಸಹಾಯ ಮಾಡುತ್ತದೆ ಎಂದು ಗ್ರೂಪ್ ಸಿಒಒ ಮತ್ತು COWI​​ ಇಂಡಿಯಾದ ಅಧ್ಯಕ್ಷ ರಾಸ್ಮಸ್ ಓಡಮ್ ತಿಳಿಸಿದ್ದಾರೆ.

ಪಿತೃತ್ವ ರಜೆಯು ಅಂತರ್ಗತ ಮತ್ತು ಮುಕ್ತ ಕೆಲಸದ ವಾತಾವರಣವನ್ನು ಬೆಳೆಸಲು ಕಂಪನಿಯ ಬದ್ಧತೆಯ ಭಾಗವಾಗಿದೆ.

ಮಾತೃತ್ವ ರಜೆ ಮುಗಿಸಿಕೊಂಡು ಸಂಸ್ಥೆಗೆ ಬರುವ ಮಹಿಳೆಯಿರೂ ಕೂಡ ಮತ್ತೆ ಹೆಚ್ಚುವರಿಯಾಗಿ ಆರು ತಿಂಗಳ ಕಾಲ ಮನೆಯಲ್ಲಿಯೇ ಇರುವಂತಹ ಸೌಲಭ್ಯದ ಆಯ್ಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

COWI​ ಕಂಪನಿಯು ಜಾಗತಿಕವಾಗಿ 86 ವಿವಿಧ ದೇಶಗಳಲ್ಲಿ 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.