Sunday, 6th October 2024

ರಿಷಿ ಸುನಕ್‌ ಅವರನ್ನು ಬಿಟ್ಟು ಯಾರನ್ನಾದರೂ ಬೆಂಬಲಿಸಿ: ಬೋರಿಸ್‌

ಲಂಡನ್‌: ಬ್ರಿಟನ್‌ನಲ್ಲಿ ಪ್ರಧಾನಿ ಅಭ್ಯರ್ಥಿಯಾದ ರಿಷಿ ಸುನಕ್‌ ಅವರನ್ನು ಬಿಟ್ಟು ಯಾರನ್ನಾದರೂ ಬೆಂಬಲಿಸಿ ಎಂದು ಹಂಗಾಮಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಬೆಂಬಲಿಗರಿಗೆ ಸೂಚಿಸಿದ್ದಾರೆ. ಬೋರಿಸ್‌ ವೈಯಕ್ತಿಕವಾಗಿ ಪಕ್ಷದವರಿಂದಲೇ ಬೆಂಬಲ ಕಳೆದು ಕೊಳ್ಳುವುದಕ್ಕೆ ಕಾರಣ ರಿಷಿ ಎಂದು ದೂಷಿಸುತ್ತಿದ್ದಾರೆ.

ಇಂಗ್ಲೆಂಡ್‌ನಲ್ಲಿ ರಾಜೀನಾಮೆಯ ಪರ್ವವೇ ಮುಂದುವರೆದಿದ್ದ ರಿಂದ ಜು.7ರಂದು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ಜಾನ್ಸನ್‌ ರಾಜೀನಾಮೆ ನೀಡಿದ್ದರು. ತಾನು ಚುನಾವಣೆ ಸ್ಪರ್ಧೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವು ದಿಲ್ಲ ಎಂದು ಹೇಳಿರುವ ಜಾನ್ಸನ್, ಸೋಲನುಭವಿಸಿರುವ ಅಭ್ಯರ್ಥಿಗಳೊಂದಿಗೆ ಸಂಭಾಷಣೆ ನಡೆಸಿ, ರಿಷಿ ಸುನಕ್‌ ಪ್ರಧಾನಿಯಾಗಬಾರದು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಹುದ್ದೆಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ನೇಮಕವಾಗಬೇಕೆಂಬುದು ಬೋರಿಸ್ ಅಭಿಪ್ರಾಯವಾಗಿದೆ. ಜೂನಿಯರ್ ಟ್ರೇಡ್ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ ಆದರೂ ಪರವಾಗಿಲ್ಲ. ಅದರೆ ರಿಷಿ ಮಾತ್ರ ತಮ್ಮ ಉತ್ತರಾಧಿಕಾರಿ ಯಾಗಬಾರದು ಬೋರಿಸ್‌ ಹೇಳಿದ್ದಾರೆ.

ಜಾನ್ಸನ್ ಮಿತ್ರರೊಬ್ಬರು ರಿಷಿಯನ್ನು ಹೊರತುಪಡಿಸಿ ಬೇರೆ ಯಾರನ್ನಾ ದರೂ ಗೆಲ್ಲಿಸಿ ಎಂಬ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

ಇನ್ನೂ ರಿಷಿ ಸುನಕ್‌ ಬೆಂಬಲಿಗ ಟೋರಿ ಬ್ಯಾಕ್‌ಬೆಂಚ್ ಸಂಸದ ರಿಚರ್ಡ್ ಹೋಲ್ಡನ್ ಮಾತನಾಡಿ, ಜಾನ್ಸನ್‌ ಅವರ ಈ ಹೇಳಿಕೆ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.