Sunday, 15th December 2024

ಡೊನಾಲ್ಡ್ ಟ್ರಂಪ್ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಮರು ಸ್ಥಾಪನೆ ಶೀಘ್ರ..!

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಮತ್ತು ಇನ್‌ ಸ್ಟಾಗ್ರಾಂ ಖಾತೆಗಳನ್ನು ಮುಂದಿನ ವಾರಗಳಲ್ಲಿ ಮರು ಸ್ಥಾಪಿಸುವುದಾಗಿ ಮೆಟಾ ಪ್ಲಾಟ್‌ ಫಾರ್ಮ್ಸ್ ಇನ್‌ಕಾರ್ಪೊರೇಷನ್ ಪ್ರಕಟಿಸಿದೆ.

2021ರ ಜನವರಿ 6ರಂದು ನಡೆದ ಕ್ಯಾಪಿಟೋಲ್ ಹಿಲ್ ಗಲಭೆ ಬಳಿಕ ಟ್ರಂಪ್ ಖಾತೆಗಳನ್ನು ಅಮಾನತು ಮಾಡಲಾಗಿತ್ತು. 2024ರ ಅಧ್ಯಕ್ಷೀಯ ಚುನಾವಣೆಗೆ ತಾವು ಮತ್ತೊಂದು ಬಾರಿ ಸ್ಪರ್ಧಿಸುವುದಾಗಿ ಟ್ರಂಪ್ ಕಳೆದ ನವೆಂಬರ್‌ನಲ್ಲಿ ಘೋಷಿಸಿದ್ದರು. ಟ್ರಂಪ್ ಫೇಸ್‌ಬುಕ್‌ಲ್ಲಿ 34 ದಶಲಕ್ಷ ಮತ್ತು ಇನ್‌ಸ್ಟಾಗ್ರಾಂನಲ್ಲಿ 23 ದಶಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.

ಪದೇ ಪದೇ ನಡೆಯುವ ಅಪರಾಧಗಳನ್ನು ತಡೆಯಲು ಹೊಸ ಮಾನದಂಡಗಳನ್ನು ರೂಪಿಸ ಲಾಗುವುದು ಎಂದು ಸಾಮಾಜಿಕ ಜಾಲತಾಣ ಕಂಪನಿ ಬ್ಲಾಗ್ ಪೋಸ್ಟ್ ಮಾಡಿದೆ.

ಆಯಾ ಪೋಸ್ಟ್‌ಗಳ ಉಲ್ಲಂಘನೆಯ ತೀವ್ರತೆಯ ಆಧಾರದಲ್ಲಿ ಒಂದು ತಿಂಗಳಿನಿಂದ ಎರಡು ವರ್ಷದವರೆಗೆ ಅಮಾನತು ಮಾಡಲಾಗುವುದು ಎಂದು ಬ್ಲಾಗ್‌ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.