Saturday, 14th December 2024

ಹೈ ಕಮಿಷನ್ ಕಚೇರಿಯಲ್ಲಿ ಡ್ರೋನ್‌ ಪತ್ತೆ: ಭದ್ರತಾ ಲೋಪಕ್ಕೆ ಪ್ರತಿಭಟನೆ

ಇಸ್ಲಾಮಾಬಾದ್: ಜಮ್ಮುವಿನಲ್ಲಿ ಪಾಕ್ ಡ್ರೋನ್ ಪತ್ತೆಯಾದ ಬಳಿಕ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದೆ. ಇದು ಪಾಕಿಸ್ತಾನ ಭಾರತದ ವಿರುದ್ಧ ಹೊಸ ಆಯುಧವನ್ನು ಪ್ರಯೋಗಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಭದ್ರತಾ ಲೋಪಕ್ಕೆ ಭಾರತ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಇದಕ್ಕೂ ಕೆಲವೇ ಗಂಟೆಗಳ ಮುನ್ನ ಬೆಳಿಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಚಟುವಟಿಕೆ ವರದಿಯಾಗಿತ್ತು. ಪಾಕಿಸ್ತಾನದ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತ್ತು.

ಬಿಎಸ್ ಎಫ್ ದಾಳಿಯ ಪರಿಣಾಮವಾಗಿ ಡ್ರೋನ್ ಹಿಮ್ಮೆಟ್ಟಿತ್ತು. ಜೂ.27 ರಂದು ಜಮ್ಮುವಿನ ವಾಯುನೆಲೆ ಮೇಲೆ ನಡೆದಿದ್ದ ಡ್ರೋನ್ ದಾಳಿಯಲ್ಲಿ ಲಷ್ಕರ್-ತೊಯ್ಬಾ-ಉಗ್ರ ಸಂಘಟನೆಯ ಕೈವಾಡವಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.