Friday, 22nd November 2024

ಬುರ್ಜ್‌ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜ: ಪಾಕಿಸ್ತಾನಕ್ಕೆ ಮುಖಭಂಗ

ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಎಂದೇ ಖ್ಯಾತಿ ದುಬೈನ ಬುರ್ಜ್‌ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ತಾರ ಮೂಡಿದೆ.

ಪಾಕಿಸ್ತಾನದ ರಾಷ್ಟ್ರಧ್ವಜದ ಬೆಳಕಿನ ಚಿತ್ತಾರ ಮೂಡಿಸದ ಹಿನ್ನೆಲೆಯಲ್ಲಿ ಬುರ್ಜ್‌ ಖಲೀಫಾ ಬಳಿ ಪಾಕಿಸ್ತಾನಿಯರು ಗಲಾಟೆ ಮಾಡಿದ ಮರುದಿನವೇ ತಿರಂಗಾ ಮೂಡಿದೆ. ಹಾಗೆಯೇ, ಪಾಕಿಸ್ತಾನಕ್ಕೆ ಮೊದಲಿಗೆ ಭಾರಿ ಮುಖಭಂಗವಾಗಿದೆ ಎಂದು ತಿಳಿದು ಬಂದಿದೆ.

ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ತಿರಂಗಾ ಧ್ವಜವನ್ನು ಬೆಳಕಿನಲ್ಲಿ ಚಿತ್ತಾರ ಮೂಡಿಸಿರುವ ವಿಡಿಯೊ ಭಾರಿ ವೈರಲ್‌ ಆಗಿದೆ. ಭಾರತೀಯರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ಬೃಹತ್‌ ಬುರ್ಜ್‌ ಖಲೀಫಾ ಮೇಲೆ ಭಾರತದ ತಿರಂಗಾ ಮೂಡುವ ವಿಡಿಯೊವನ್ನು ಮುಫದ್ದಲ್‌ ವೋಹ್ರಾ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿ ದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಜನಗಣಮನ ಹಾಡು ಕೂಡ ಕೇಳಿದ್ದು, ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತಕ್ಕಿಂತ ಒಂದು ದಿನ ಮೊದಲು ಅಂದರೆ, ಆಗಸ್ಟ್‌ 14ರ ಮಧ್ಯರಾತ್ರಿ ಪಾಕಿಸ್ತಾನವು ಸ್ವಾತಂತ್ರ್ಯ ದಿನ ಆಚರಿಸುತ್ತದೆ. ಹಾಗಾಗಿ, ಬುರ್ಜ್‌ ಖಲೀಫಾ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜದ ಬೆಳಕಿನ ಚಿತ್ತಾರ ಮೂಡಲಿದೆ ಎಂಬ ವಿಶ್ವಾಸದಿಂದ ನೂರಾರು ಪಾಕಿಸ್ತಾ ನಿಯರು ಆಗಸ್ಟ್‌ 14ರಂದು ಮಧ್ಯರಾತ್ರಿ ಬುರ್ಜ್‌ ಖಲೀಫಾ ಬಳಿ ಸೇರಿದ್ದರು.