Saturday, 14th December 2024

ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಭೂಕಂಪ

ಟೋಕಿಯೊ: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಪ್ರಬಲ ಭೂಕಂಪದಲ್ಲಿ ನಾಲ್ಕು ಜನರು ಮೃತಪಟ್ಟಿದ್ದು, 126 ಮಂದಿ ಗಾಯ ಗೊಂಡಿದ್ದಾರೆ. 7.3 ತೀವ್ರತೆಯ ಭೂಕಂಪವು ಈ ಪ್ರದೇಶದಲ್ಲಿ ಒಂದು ಮೀಟರ್ ಸುನಾಮಿ ಉಂಟುಮಾಡಿದೆ.

ಫೂಕುಶಿಮಾ ನಗರದ ಒಳನಾಡಿನ ಪ್ರಿಫೆಕ್ಚರಲ್ ರಾಜಧಾನಿಯಲ್ಲಿನ ಮುಖ್ಯ ರೈಲು ನಿಲ್ದಾಣದ ಬಳಿ ರಸ್ತೆಯಲ್ಲಿ ಡಿಪಾರ್ಟ್‌ ಮೆಂಟ್ ಸ್ಟೋರ್ ಕಟ್ಟಡದ ಗೋಡೆಗಳು ಹಾಗೂ ಕಿಟಕಿಗಳ ಚೂರುಗಳು ನೆಲಕ್ಕೆ ಬಿದ್ದಿವೆ.