Sunday, 15th December 2024

ವಾಯುವ್ಯ ಚೀನಾದಲ್ಲಿ 5.2 ತೀವ್ರತೆಯ ಭೂಕಂಪ

ಜಿಂಗ್: ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ಭಾನು ವಾರ 5.2 ತೀವ್ರತೆಯ ಭೂಕಂಪ ಸಂಭವಿಸಿದೆ.

ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ ಪ್ರಕಾರ, ವಾಯುವ್ಯ ಚೀನಾದ ಅಕ್ಕಿ ಕೌಂಟಿಯಲ್ಲಿ ಬೆಳಗ್ಗೆ 6:02 ಗಂಟೆಗೆ (ಬೀಜಿಂಗ್ ಸಮಯ) ಭೂಕಂಪನದ ಅನುಭವ ಉಂಟಾಗಿದೆ.

ಭೂಕಂಪದ ಕೇಂದ್ರವು 40.88 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 78.14 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕಂಡುಬಂದಿದೆ. 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ.

ಶನಿವಾರ 3:29 ಕ್ಕೆ ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದರ ಬೆನ್ನಲ್ಲೇ ಇಂದು ಅಕ್ಕಿ ಕೌಂಟಿಯಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.