Sunday, 24th November 2024

ಚಿಲಿಯ ಅಂಟಾರ್ಕ್ಟಿಕಾ ಕರಾವಳಿಯಲ್ಲಿ ಭೂಕಂಪ: 7.0 ತೀವ್ರತೆ

ಸ್ಯಾಂಟಿಯಾಗೋ: ಚಿಲಿಯ ಅಂಟಾರ್ಕ್ಟಿಕಾ ಕರಾವಳಿಯಲ್ಲಿ ಶನಿವಾರ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ಕಂಡು ಬಂದಿದೆ. ಚಿಲಿಯ ಎಡ್ವರ್ಡೊ ಫ್ರೀ ಬೇಸ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಡ್ವರ್ಡೊ ಫ್ರೀ ಬೇಸ್‌ ನಿಂದ ಪೂರ್ವಕ್ಕೆ 210 ಕಿಲೋಮೀಟರ್ (130 ಮೈಲಿ) ದೂರದಲ್ಲಿ ಶನಿವಾರ ರಾತ್ರಿ 8: 36 ಕ್ಕೆ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ.

ಚಿಲಿಯ ವಾಯುನೆಲೆಯ ಸುತ್ತಾ ಹಳ್ಳಿ, ಆಸ್ಪತ್ರೆ, ಶಾಲೆ, ಬ್ಯಾಂಕ್, ಅಂಚೆ ಕಚೇರಿ ಮತ್ತು ಪ್ರಾರ್ಥನಾ ಮಂದಿರಗಳಿದ್ದು, ಅತಿ ದೊಡ್ಡ ಜನನಿಬಿಡ ಪ್ರದೇಶ ಎನಿಸಿಕೊಂಡಿದೆ.

ಸ್ಯಾಂಟಿಯಾಗೊ ಬಳಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ, ಆದರೆ ಯಾವುದೇ ಹಾನಿ ಅಥವಾ ನಂತರದ ಪರಿಣಾಮ ಸಂಭ ವಿಸಿಲ್ಲ ಎಂದು ಹೇಳಿದೆ. ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಚಿಲಿ ಕೂಡಾ ಒಂದಾಗಿದೆ.