Wednesday, 9th October 2024

ಹೈಟಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 1,297ಕ್ಕೆ ಏರಿಕೆ

ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದಲ್ಲಿ ಕಳೆದ ಭಾನುವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,297ಕ್ಕೆ ಏರಿಕೆಯಾಗಿದೆ.

ರಿಕ್ಟರ್​ ಮಾಪನದಲ್ಲಿ 7.2 ತೀವ್ರತೆ ದಾಖಲಾಗಿದೆ. ಪ್ರಬಲ ಭೂಕಂಪದಿಂದಾಗಿ ಸುಮಾರು 5700 ಮಂದಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು, ಕಟ್ಟಡ ಗಳು ಉರುಳಿ ಬಿದ್ದಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದೇಶದ ನಾಗರಿಕ ರಕ್ಷಣಾ ಏಜೆನ್ಸಿ ನೀಡಿದ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನದಲ್ಲಿ ಶನಿವಾರ ರಾತ್ರಿ ಭೂಕಂಪ ಸಂಭವಿಸಿದೆ. ಈಗಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲಾಗುತ್ತಿದೆ. 2010ರಲ್ಲಿ ಇದೇ ರೀತಿ ಭಯಾನಕ ಭೂಕಂಪ ಹೈಟಿ ದೇಶದಲ್ಲಿ ಸಂಭವಿಸಿತ್ತು.