Monday, 16th September 2024

ಕಠ್ಮಂಡುವಿನಲ್ಲಿ 5.3 ತೀವ್ರತೆಯ ಭೂಕಂಪನ

ಕಠ್ಮಂಡು : ನೇಪಾಳದಲ್ಲಿ ಬುಧವಾರ 5.3 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದೆ. ಕಠ್ಮಂಡುವಿನ ವಾಯುವ್ಯಕ್ಕೆ 113 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.

‘ಭೂಕಂಪದ ಕೇಂದ್ರಬಿಂದು ಬೆಳಿಗ್ಗೆ 5:42ರ ಸುಮಾರಿಗೆ ಲ್ಯಾಂಜಂಗ್ ಜಿಲ್ಲೆಯ ಭುಲ್ಭುಲೆಯಲ್ಲಿದೆ. ಇದು 5.8 ತೀವ್ರತೆಯೊಂದಿಗೆ ದಾಖಲಾಗಿದೆ’ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರದ ಭೂಕಂಪಶಾಸ್ತ್ರಜ್ಞ ಡಾ. ಲೋಕ ಬಿಜಯ್ ಅಧಿಕಾರಿ ಎಎನ್ ಐಗೆ ತಿಳಿಸಿದ್ದಾರೆ.

ಯಾವುದೇ ಜೀವ ಹಾನಿ ಇನ್ನೂ ವರದಿಯಾಗಿಲ್ಲ.

Leave a Reply

Your email address will not be published. Required fields are marked *