Saturday, 14th December 2024

ಮೊಟ್ಟೆ ಉತ್ಪಾದಕ ಘಟಕದಲ್ಲಿ ಅಗ್ನಿ ದುರಂತ: 1.2 ಮಿಲಿಯನ್ ಕೋಳಿಗಳು ಸುಟ್ಟು ಭಸ್ಮ

ವಾಷಿಂಗ್ಟನ್‌: ಅಮೆರಿಕದ ಯುನೈಟೆಡ್ ಸ್ಟೇಟ್ ನ ಅತಿದೊಡ್ಡ ಮೊಟ್ಟೆ ಉತ್ಪಾದಕ ಘಟಕ ಒಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 1.2 ಮಿಲಿಯನ್ ಕೋಳಿಗಳು ಸುಟ್ಟುಹೋಗಿವೆ.

ಇಲಿನಾಯ್ಸ್ನ ಫರಿನಾದಲ್ಲಿರುವ ಫಾರ್ಮ್ನಲ್ಲಿರುವ ಸಂಪೂರ್ಣ ಕಟ್ಟಡಗಳನ್ನು ಬೆಂಕಿ ಆವರಿಸಿದೆ. ಅಲ್ಲಿ 1.2 ಮಿಲಿಯನ್ ಕೋಳಿಗಳು ಇದ್ದವು.

ಸುತ್ತಮುತ್ತಲಿನ ಪ್ರದೇಶಗಳಿಂದ 15 ಕ್ಕೂ ಹೆಚ್ಚು ಅಗ್ನಿಶಾಮಕ ಟೆಂಡರ್ ಗಳು ಭಾರಿ ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿದವು.