Friday, 22nd November 2024

2024ರ ಜನವರಿಯಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ

ರಾಚಿ : ಪಾಕಿಸ್ತಾನದಲ್ಲಿ 2024ರ ಜನವರಿ ಕೊನೆಯ ವಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ಕ್ಷೇತ್ರಗಳ ಡಿಲಿಮಿಟೇಶನ್ ಕೆಲಸವನ್ನ ಪರಿಶೀಲಿಸಲಾಗಿದೆ ಮತ್ತು ಕ್ಷೇತ್ರಗಳ ಡಿಲಿಮಿಟೇಶನ್ಗಾಗಿ ಪ್ರಾಥಮಿಕ ಪಟ್ಟಿಯನ್ನ ಸೆಪ್ಟೆಂಬರ್ 27ರಂದು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಕ್ಷೇಪಣೆಗಳು ಮತ್ತು ಸಲಹೆಗಳನ್ನ ಆಲಿಸಿದ ನಂತರ ಅಂತಿಮ ಪಟ್ಟಿಯನ್ನ ನವೆಂಬರ್ 30ರಂದು ಬಿಡುಗಡೆ ಮಾಡಲಾಗುವುದು. 54 ದಿನಗಳ ಪ್ರಚಾರ ಕಾರ್ಯಕ್ರಮ ಪೂರ್ಣಗೊಂಡ ನಂತರ ಜನವರಿ ಕೊನೆಯ ವಾರದಲ್ಲಿ ಚುನಾವಣೆ ನಡೆಯಲಿದೆ.

ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆಯ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು ರಾಜಕೀಯ ಪಕ್ಷಗಳೊಂದಿಗೆ ಸಭೆಯನ್ನ ನಿಗದಿಪಡಿಸಲಾಗಿದೆ ಎಂದು ಇಸಿಪಿ ಹೇಳಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಇಸಿಪಿ ಪ್ರಕಾರ, ನಿಯಮಗಳನ್ನ ಅಂತಿಮಗೊಳಿಸುವ ಮೊದಲು ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಾಗಿ ಕರಡು ನೀತಿ ಸಂಹಿತೆಯನ್ನ ಹಂಚಿಕೊಳ್ಳಲಾಗಿದೆ.