Friday, 22nd November 2024

Elon Musk: ಇಟಾಲಿಯನ್ ಪ್ರಧಾನಿ ಮೆಲೋನಿ ಜತೆ ಡೇಟಿಂಗ್?‌ ವೈರಲ್‌ ಪಿಕ್‌ ಬಗ್ಗೆ ಎಲಾನ್‌ ಮಸ್ಕ್ ಹೇಳಿದ್ದೇನು?

Elon Musk

ನವದೆಹಲಿ: ಟೆಸ್ಲಾ ಸಿಇಒ(Tesla CEO) ಎಲಾನ್‌ ಮಸ್ಕ್(Elon Musk) ಅವರು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ(Giorgia Meloni) ಅವರು ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಕಾರ್ಯಕ್ರಮದಲ್ಲಿ ಇವರಿಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ಪೋಟೋ ವೈರಲ್‌ ಆಗಿರುವ ಬೆನ್ನಲ್ಲೇ ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮತ್ತೊಂದೆಡೆ ಈ ವದಂತಿಗೆ ಸ್ವತಃ ಮಸ್ಕ್‌ ಸ್ಪಷ್ಟನೆ ನೀಡಿದ್ದಾರೆ.

ಟೆಸ್ಲಾ ಓನರ್‌ ಸಿಲಿಕಾನ್‌ ವ್ಯಾಲಿ ತನ್ನ ಎಕ್ಸ್‌ ಖಾತೆಯಲ್ಲಿ ಎಲನ್‌ ಮಸ್ಕ್‌ ಮತ್ತು ಮೆಲೋನಿಯವರ ಫೋಟೋ ಶೇರ್‌ ಮಾಡಿಕೊಂಡುವ ಇವರಿಬ್ಬರು ಡೇಟ್‌ ಮಾಡುತ್ತಿದ್ದಾರೆಯೇ ಎಂದು ಪೋಸ್ಟ್‌ವೊಂದನ್ನು ಮಾಡಿತ್ತು. ಅಲ್ಲಿಂದ ಈ ಇಬ್ಬರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿ ಶುರುವಾಗಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಸ್ವತಃ ಮಸ್ಕ್‌ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ಈ ಪೋಸ್ಟ್‌ಗೆ ಇಲ್ಲ..ನಾವಿಬ್ಬರು ಡೇಟಿಂಗ್‌ ಮಾಡ್ತಿಲ್ಲ ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ಸೆಪ್ಟೆಂಬರ್ 24 ರಂದು ನ್ಯೂಯಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೆಸ್ಲಾ ಮುಖ್ಯಸ್ಥರು ಇಟಾಲಿಯನ್ ಪ್ರಧಾನ ಮಂತ್ರಿಯನ್ನು ಹೊಗಳಿದ ನಂತರ ಮಸ್ಕ್ ಮತ್ತು ಮೆಲೋನಿ ಬಗ್ಗೆ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿತ್ತು. ಮೆಲೊನಿಗೆ ಅಟ್ಲಾಂಟಿಕ್ ಕೌನ್ಸಿಲ್ ಗ್ಲೋಬಲ್ ಸಿಟಿಜನ್ ಪ್ರಶಸ್ತಿಯನ್ನು ನೀಡುವಾಗ, ಮಸ್ಕ್ ಅವರು ಬಾಹ್ಯ ಸೌಂದರ್ಯದಷ್ಟೇ ಆಂತರಿಕ ಸೌಂದರ್ಯ ಹೊಂದಿರುವ ವ್ಯಕ್ತಿ ಮೆಲೋನಿ. ಅವರಿಗೆ ಈ ಗೌರವ ನೀಡುತ್ತಿರುವುದು ಖುಷಿಯ ಸಂಗತಿ ಎಂದು ಮಸ್ಕ್‌ ಹೇಳಿದ್ದರು. ಅಲ್ಲದೇ ಮೆಲೋನಿ ಪ್ರಾಮಾಣಿಕ ಮತ್ತು ಸತ್ಯವಂತಳು ಎಂದು ಹಾಡಿ ಹೊಗಳಿದ್ದರು.

ಮೆಲೋನಿ ಅವರು “ಯುರೋಪಿಯನ್ ಯೂನಿಯನ್ ನ ಬಲವಾದ ಬೆಂಬಲಕ್ಕಾಗಿ ಮತ್ತು ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಗಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೆಲೋನಿ ತಮ್ಮ ಎಕ್ಸ್‌ ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಕಮೆಂಟ್‌ಗಳಿಗಾಗಿ ಮಸ್ಕ್ ಅವರಿಗೆ ಧನ್ಯವಾದ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Anura Kumara Dissanayake: ಖಡಕ್‌ ವಿದೇಶಾಂಗ ನೀತಿಗೆ ಶ್ರೀಲಂಕಾ ಒತ್ತು; ಭಾರತ, ಚೀನಾ ಜತೆಗಿನ ಸಂಬಂಧದ ಬಗ್ಗೆ ದಿಸ್ಸಾನಾಯಕೆ ನಿಲುವೇನು?