Sunday, 15th December 2024

ಕೊರೋನಾ ಲಸಿಕೆ ಹಾಕಿಸಿಕೊಂಡ ಇಂಗ್ಲೆಂಡ್ ಪ್ರಧಾನಿ ಬೋರಿಸ್

ಲಂಡನ್: ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅಸ್ಟ್ರಾಜೆನೆಕಾ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ದೇಶದಲ್ಲಿ ಪ್ರಸ್ತುತ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ 56 ವರ್ಷದ ಪ್ರಧಾನಿ ಜಾನ್ಸನ್ ಸೇರಿದ್ದಾರೆ.

ನಾನು ನನ್ನ ಮೊದಲ ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಸ್ವೀಕರಿಸಿದ್ದೇನೆ. ನಾವು ಸಹಜ ಜೀವನಕ್ಕೆ ಮರಳಲು ಮಾಡಬಹು ದಾದ ಅತ್ಯುತ್ತಮ ಕೆಲಸ ಹೀಗಾಗಿ ಎಲ್ಲರೂ ಲಸಿಕೆ ಪಡೆದು ಆರೋಗ್ಯವಂತರಾಗಲಿ, ಎಂದಿನಂತೆ ಸಹಜ ಜೀವನ ನಡೆಸಲಿ ಎಂದು ಪ್ರಧಾನಿ ಜಾನ್ಸನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಲಸಿಕೆ ಸ್ವೀಕರಿಸುವ ಫೋಟೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾರೆ.