Sunday, 15th December 2024

ಈಕ್ವೆಡಾರ್, ಉತ್ತರ ಪೆರುವಿನಲ್ಲಿ 6.8 ತೀವ್ರತೆ ಭೂಕಂಪ

ಕ್ವಿಟೊ (ಈಕ್ವೆಡಾರ್): ಈಕ್ವೆಡಾರ್ ಮತ್ತು ಉತ್ತರ ಪೆರುವಿನ ಕರಾವಳಿ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ 13 ಜನರು ಮೃತಪಟ್ಟಿದ್ದಾರೆ.

ಗುವಾಯಾಸ್ ಪ್ರಾಂತ್ಯದ ಬಾಲಾವೊ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಮತ್ತು ಭೂಮಿಯಿಂದ 66.4 ಕಿಮೀ ಆಳದಲ್ಲಿ ಸಂಭವಿಸಿದೆ. ಎಲ್ ಒರೊ ಪ್ರಾಂತ್ಯದಲ್ಲಿ 12 ಮಂದಿ ಸಾವನ್ನಪ್ಪಿದ್ದು, ಅಜುವಾಯ್ ಪ್ರಾಂತ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಾಧಿತರಾದವರಿಗೆ ತಮ್ಮ ಎಲ್ಲಾ ಬೆಂಬಲವನ್ನು ನೀಡಲು ತುರ್ತು ತಂಡಗಳು ಸಜ್ಜುಗೊಳ್ಳುತ್ತಿವೆ ಎಂದು ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.