Saturday, 14th December 2024

ಬಾಂಗ್ಲಾದೇಶದ ಮಾಜಿ ಸಿಜೆಐಗೆ 11 ವರ್ಷಗಳ ಜೈಲು ಶಿಕ್ಷೆ

ಢಾಕಾ: ಅಕ್ರಮ ಹಣ ವರ್ಗಾವಣೆ ಮತ್ತು ನಂಬಿಕೆ ಉಲ್ಲಂಘನೆ ಪ್ರಕರಣದಲ್ಲಿ ಬಾಂಗ್ಲಾ ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಸುರೇಂದ್ರ ಕುಮಾರ್ ಸಿನ್ಹಾ ಅವರಿಗೆ ಬಾಂಗ್ಲಾ ದೇಶ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸುರೇಂದ್ರ ಕುಮಾರ್ ಸಿನ್ಹಾ ಅವರು ದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೊದಲ ಮುಖ್ಯ ನ್ಯಾಯಮೂರ್ತಿ.

ಢಾಕಾ ವಿಶೇಷ ಮ್ಯಾಜಿಸ್ಟ್ರೇಟ್ ಶೇಖ್ ನಜ್ಮುಲ್ ಆಲಂ ಅವರು ಮಾಜಿ ಮುಖ್ಯ ನ್ಯಾಯಾಧೀಶರಿಗೆ ಅಕ್ರಮ ಹಣ ವರ್ಗಾವಣೆಗಾಗಿ 7 ವರ್ಷ ಮತ್ತು ಕ್ರಿಮಿನಲ್ ನಂಬಿಕೆ ಉಲ್ಲಂಘನೆಗಾಗಿ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.

ನ್ಯಾಯಾಧೀಕರಣವು ‘ಹಣ ಲಾಂಡರಿಂಗ್‌ನ ಫಲಾನುಭವಿಗಳಲ್ಲಿ ನ್ಯಾಯಮೂರ್ತಿ ಸಿನ್ಹಾ ಸಮಾನರು’ ಎಂದು ಹೇಳಿದೆ.

ಜಸ್ಟಿಸ್ ಸಿನ್ಹಾ ಅವರು ಜನವರಿ 2015 ರಿಂದ ನವೆಂಬರ್ 2017 ರವರೆಗೆ ದೇಶದ 21 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರ ಆರೋಪಿಸಿತ್ತು. ನ್ಯಾಯಮೂರ್ತಿ ಸಿನ್ಹಾ ಅವರು ನಾಲ್ಕು ವರ್ಷಗಳ ಹಿಂದೆ ವಿದೇಶ ಪ್ರವಾಸದ ವೇಳೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.