ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ ಎರಡು ಎಕ್ಸ್ ಪ್ರೆಸ್ ರೈಲುಗಳ ನಡುವೆ ಢಿಕ್ಕಿ ಸಂಭವಿಸಿ, 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ದಹಾರ್ಕಿ ರೈಲಿ ನಿಲ್ದಾಣ ಹಾಗೂ ರೇತಿ ಯಲ್ಲಿರುವ ನಿಲ್ದಾಣದ ನಡುವೆ ಈ ಡಿಕ್ಕಿ ನಡೆದಿದೆ. ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಹಾಗೂ ಮಿಲಾತ ಎಕ್ಸ್ ಪ್ರೆಸ್ ರೈಲು ನಡುವೆ ಅಪಘಾತವಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಗ್ರಾಮಸ್ಥರು, ಪೊಲೀಸರು, ರಕ್ಷಣಾ ಪಡೆ ಧಾವಿಸಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸಿಗ್ನಲ್ ವ್ಯವಸ್ಥೆಯ ದೋಷವೇ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.